Posts

Kitchen mania (shailina shwetha)

Kitchen mania (shailina shwetha) : Recipes about sweet-dish, juices, milkshake, instant recipes, snacks, cake, breakfast, lunch, dinner and much more which can be helps in your kitchen  

ಕುಚ್ಚಿಲಕ್ಕಿ ಲಡ್ಡು (How to make boiled rice laddu)

Image
ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ  ಎಲ್ಲರಿಗೂ ನನ್ನ  ನಮಸ್ಕಾರಗಳು ಇವತ್ತಿನ ದಿನ  ನಾವು ರುಚಿ ರುಚಿಯಾದ ಕುಚ್ಚಿಲಕ್ಕಿ ಲಡ್ಡುವನ್ನು ಮಾಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಿ ಒಂದರಿಂದ ಎರಡು  ತಿಂಗಳವರೆಗೆ ಶೇಖರಿಸಿ ಕೂಡ ಇಡಬಹುದು. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಒಂದು ಸಿಹಿ ತಿನಿಸು ಆಗಿದೆ. ಇದು ಆರೋಗ್ಯಕ್ಕೆ ಉತ್ತಮ ಕೂಡ.  ನೀವು ಕೂಡ ಇದನ್ನು ಮಾಡಿ ರುಚಿಯನ್ನು ಸವಿಯಿರಿ.  ಕುಚ್ಚಿಲಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು  ಕುಚ್ಚಿಲಕ್ಕಿ ( ಕೆಂಪು ಅಕ್ಕಿ ) - ೧ ಕೆ.ಜಿ  ಹೆಸರು ಕಾಳು - ೧/೪ ಕೆ.ಜಿ  ಬಿಳಿ ಎಳ್ಳು - ೧೦೦ ಗ್ರಾಂ  ಬೆಲ್ಲ - ೧/೨ ಕೆ.ಜಿ  ಗೋಡಂಬಿ - ೧೦೦ ಗ್ರಾಂ  ಏಲಕ್ಕಿ ಪುಡಿ - ೧೦ ಗ್ರಾಂ  ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ   ಒಂದು ಕಾವಲಿಯಲ್ಲಿ ಕುಚ್ಚಿಲಕ್ಕಿಯನ್ನು ಚೆನ್ನಾಗಿ ಅರಳುವ ತನಕ ಹುರಿದುಕೊಳ್ಳಿ. ನಂತರ ಕಾವಲಿಯಲ್ಲಿ ಹೆಸರು ಕಾಳು ಸ್ವಲ್ಪ ಗಟ್ಟಿಯಾಗುವ ತನಕ ಹುರಿದುಕೊಳ್ಳಿ. ಹಾಗೆಯೆ ಎಳ್ಳನ್ನು ಕೂಡ ಸ್ವಲ್ಪ ಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಹುರಿದು ಕೊಂಡಿದ್ದ ಕುಚ್ಚಿಲಕ್ಕಿ ಮತ್ತು ಹೆಸರು ಕಾಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.    ಈಗ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಬಿಸಿ ಮಾಡಲು ಇಡಿ, ಅದಕ್ಕೆ ಅರ್ಧ ಲೀಟರ್ ನೀರನ್ನು ...

ಕುಂಬಳಕಾಯಿ ಶರಬತ್ (How to make Ash Melon Juice)

Image
 ಕುಂಬಳಕಾಯಿ ಶರಬತ್ ಮಾಡುವ ವಿಧಾನ ಎಲ್ಲರಿಗೂ ನನ್ನ ನಮಸ್ಕಾರಗಳು ಇವತ್ತಿನ ದಿನ ನಾವು ಕುಂಬಳಕಾಯಿ ಶರಬತ್ ಹೇಗೆ ಮಾಡೋದು ಎಂದು ನೋಡೋಣ. ಈ ಕುಂಬಳಕಾಯಿ ಪಾನೀಯ ದೇಹಕ್ಕೆ ತುಂಬಾ ಆರೋಗ್ಯಕರವಾಗಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತುಂಬಾ ಪರಿಣಾಮಕಾರಿಯಾಗಿರುತ್ತೆದೆ, ಈ ಪಾನೀಯ ಶುಗರ್, ಬಿ.ಪಿ, ಜೀರ್ಣಕ್ರಿಯೆ ಮತ್ತು ಶರೀರದ ತೂಕವನ್ನು ಸಮತೋಲನವಾಗಿ ಇಡಲು ಸಹಕಾರಿಯಾಕಗಿದೆ. ಇದನ್ನು ಸಣ್ಣವರಿಂದ ಹಿಡಿದು ದೊಡ್ಡವರವೆರೆಗೂ ಕೂಡ ಸೇವಿಸಬಹುದು, ಬನ್ನಿ ಈಗ ಕುಂಬಳಕಾಯಿ ಪಾನೀಯ ಹೇಗೆ ಮಾಡೋದು ನೋಡೋಣ.  ಕುಂಬಳಕಾಯಿ ಶರಬತ್ ಮಾಡಲು ಬೇಕಾಗುವ ಸಾಮಗ್ರಿಗಳು : ಬೂದು ಕುಂಬಳಕಾಯಿ - ೧/೨ ಕೆ.ಜಿ.  ಲಿಂಬೆ ಹಣ್ಣು - ೧/೨ ತುಂಡು  ಪುದೀನ ಎಲೆ - ೦೨ ಎಲೆ ಕುಂಬಳಕಾಯಿ ಶರಬತ್ ಮಾಡಲು ವಿಧಾನ : ಬೂದು ಕುಂಬಳಕಾಯಿಯ ಸಿಪ್ಪೆಯನ್ನು ತೆಗೆದು, ಅದರ ಒಳಗಿನ ಬೀಜದ ತಿರುಳನ್ನು ತೆಗೆದು, ನಂತರ ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಮಿಕ್ಸರ್ ನಲ್ಲಿ ಕತ್ತರಿಸಿದ ಕುಂಬಳಕಾಯಿಯ ತುಂಡುಗಳನ್ನು ಹಾಕಿ ಚೆನ್ನಾಗಿ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ, ಈಗ ರುಬ್ಬಿದ ಪೇಸ್ಟನ್ನು ಒಂದು ಶುಚಿಯಾದ ಹಾಗೂ ಬಿಳಿ ಬಟ್ಟೆಯ ಸಹಾಯದಿಂದ ಚೆನ್ನಾಗಿ ಹಿಂಡಿ ರಸವನ್ನು ತೆಗೆದುಕೊಳ್ಳಿ ಇದಕ್ಕೆ ನೀರನ್ನು  ಸೆರೆಸಿಕೊಳ್ಳುವ ಅಗತ್ಯವಿಲ್ಲ.    ಈಗ ಕುಂಬಳಕಾಯಿ...

ರವಾ ಉತ್ತಪ್ಪ ( How to make rava uttappa)

ರವಾ ಉತ್ತಪ್ಪವನ್ನು ಮಾಡುವ ವಿಧಾನ  ಎಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಇನ್ಸ್ಟಂಟ್ ಆಗಿ ಮತ್ತು ಬೇಗನೆ ಆಗುವ ರವ ಉತ್ತಪ್ಪವನ್ನು ಹೇಗೆ ಮಾಡೋದು ನೋಡೋಣ. ಇದು ತಿನ್ನಲು ತುಂಬಾ ರುಚಿಯಾಗಿಯೂ ಮತ್ತು ಗರಿ ಗರಿಯಾಗಿಯೂ ಇರುತ್ತದೆ.  ರವಾ ಉತ್ತಪ್ಪಕೆ ಬೇಕಾಗುವ ಸಾಮಗ್ರಿಗಳು   ರವಾ - ೨ ಕಪ್  ಮೊಸರು - ೧ ಕಪ್  ಕ್ಯಾರಟ್ - ೧/೨ ಕಪ್  ಬೀನ್ಸ್ - ೧/೨ ಕಪ್  ನೀರುಳ್ಳಿ - ೧/೪ ಕಪ್  ಕೊತ್ತೊಂಬರಿ ಸೊಪ್ಪು - ೧/೪ ಕಪ್  ಉಪ್ಪು - ರುಚಿಗೆ ತಕ್ಕಷ್ಟು  ತುಪ್ಪ - ೫ ರಿಂದ ೬ ಚಮಚ  ಮಾಡುವ ವಿಧಾನ  ಮೊದಲಿಗೆ ಎರಡು ಕಪ್ ರವೆಗೆ ಒಂದು ಕಪ್ ಮೊಸರನ್ನು ಸೇರಿಸಿ ಚೆನ್ನಾಗಿ ಬೆರಸಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಸುಮಾರು ಇಪ್ಪತ್ತು ನಿಮಿಷಗಳ ವರೆಗೆ ಒಂದು ಮುಚ್ಚಳವನ್ನು ಮುಚ್ಚಿ ಇಡಬೇಕು.  ರವೆ ಹಿಟ್ಟು ಇಪ್ಪತ್ತು ನಿಮಿಷಗಳ ತನಕ ನೆನೆದ ನಂತರ ಅದು ಸ್ವಲ್ಪ ಗಟ್ಟಿಯಾಗುತ್ತದೆ.  ನಂತರ ಬೇಕಾದರೆ ಮಾತ್ರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ನಮ್ಮ ರವಾ ಹಿಟ್ಟು ಇರಬೇಕು ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ತುಂಬಾ ಸಣ್ಣಕೆ ಹೆಚ್ಚಿದ ಕ್ಯಾರೆಟ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ಬೀನ್ಸ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ನೀರುಳ್ಳಿ...

ಚಾಕಲೇಟ್ ಐಸ್ಕ್ರೀಮ್ (Home made chocolate ice cream )

Image
 ಚಾಕಲೇಟ್ ಐಸ್ಕ್ರೀಮ್ ಮಾಡುವ ವಿಧಾನ  ವೀಕ್ಷಕರಿಗೆ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಅನ್ನು  ಹೇಗೆ ಮಾಡೋದು ನೋಡೋಣ. ಕೇವಲ ನಾಲ್ಕು ವಸ್ತುಗಳಿಂದ ಮನೆಯಲ್ಲಿಯೇ ಸುಲಭವಾಗಿ ಐಸ್ಕ್ರೀಮ್ ಅನ್ನು ತಯಾರಿಸಿಕೊಳ್ಳಬಹುದು. ಇದು ತುಂಬಾ ಟೇಸ್ಟಿ ಯಾಗಿಯೂ ಮತ್ತು ತುಂಬಾ ಕ್ರೀಮಿಯಾಗಿಯೂ ಇರುತ್ತದೆ. ಬನ್ನಿ ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಹೇಗೆ ಮಾಡೋದು ನೋಡೋಣ.   ಚಾಕಲೇಟ್ ಐಸ್ಕ್ರೀಮ್ ಗೆ ಬೇಕಾಗುವ ಸಾಮಾಗ್ರಿಗಳು  ಅಮೂಲ್ ವಿಪ್ಪಿಂಗ್ ಕ್ರೀಮ್ - ೨೦೦ ಗ್ರಾಂ  ಕಂಡೆನ್ಸ್ ಮಿಲ್ಕ್ - ೧೦೦ ಗ್ರಾಂ  ಕೋಕೋ ಪೌಡರ್ - ೨ ಚಮಚ  ಐಸಿಂಗ್ ಶುಗರ್ - ರುಚಿಗೆ ತಕ್ಕಷ್ಟು ಮಾಡುವ ವಿಧಾನ  ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಹಾಕಿಕೊಳ್ಳಿ, ನಂತರ ಆ ಐಸ್ ಕ್ಯೂಬ್ಸ್ ಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯನ್ನು ಫ್ರಿಡ್ಜ್ ನಲ್ಲಿ ಇಟ್ಟು ಆ ಪಾತ್ರೆ ಸಂಪೂರ್ಣ ತಣ್ಣಗಾದ ಮೇಲೆ ತೆಗೆಯಿರಿ. ಐಸ್ ಕ್ಯೂಬ್ ಅನ್ನು ಹಾಕಿದಂತಹ ಪಾತ್ರೆಯ ಮೇಲೆ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಇಟ್ಟಂತಹ ಪಾತ್ರೆಯನ್ನು ಇಡಿರಿ. ನಂತರ ಆ ಪಾತ್ರೆಯಲ್ಲಿ ಅಮೂಲ್ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿಕೊಳ್ಳಿ. ಈ ರೀತಿ ಕ್ರೀಮ್ ಅನ್ನು ವಿಪ್ ಮಾಡುವುದರಿಂದ ಬೇಗ ಕ್ರೀಮ್ ಆಗುತ್ತದೆ ಮತ್ತು ಕ್ರೀಮ್ ಬಿಸಿಯಾಗುವುದಿಲ್ಲ, ಕೆಲವೊಮ್ಮೆ ಕ್ರೀಮ್ ಹ್ಯಾಂಡ್...

KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )

Image
KFC ತರಹದ ಚಿಕನ್ ಲೆಗ್ ಪೀಸ್ ಮಾಡುವ ವಿಧಾನ  ನಮಸ್ಕಾರ ನನ್ನ ವೀಕ್ಷಕರಿಗೆ. ಇವತ್ತಿನ ದಿನ ನಾವು ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ. ಇದಕ್ಕೆ ಚಿಕನ್ ಫಿಂಗರ್ಸ್ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ, ಪಾರ್ಟಿ ಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಮಾಡುತ್ತೇವೆ. ಇದು ತಿನ್ನಲು ಹೊರಗಿಂದ ಕ್ರಂಚಿ ಒಳಗಿಂದ ಜ್ಯೂಸಿ ಮತ್ತು ತುಂಬಾ ಕ್ರಿಸ್ಪಿಯಾಗಿರುತ್ತದೆ. ಬನ್ನಿ ಈಗ ನಾವು KFC ಸ್ಟೈಲ್ ನಲ್ಲಿ ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ.  ಚಿಕನ್ ಲೆಗ್ ಪೀಸ್ ಗೆ ಬೇಕಾಗುವ ಸಾಮಗ್ರಿಗಳು  ಚಿಕನ್ ಲೆಗ್ ಪೀಸ್ - ೧೨ ಶುಂಠಿ ಬೆಳ್ಳುಳ್ಳಿ ಪೇಸ್ಟ್ - ೧ ಚಮಚ  ಮೆಣಸಿನ ಪುಡಿ - ೧ ಚಮಚ  ಕಾಳುಮೆಣಸಿನ ಪುಡಿ - ೧ ಚಮಚ  ಅರಶಿನ ಪುಡಿ - ೧/೨ ಚಮಚ ಮೊಸರು - ೫೦ ಗ್ರಾಂ  ಸೋಯಾ ಸಾಸ್ - ೧ ಚಮಚ  ಕಾರ್ನ್ ಫ್ಲೋರ್ - ೨ ಚಮಚ  ಮೈದಾ ಹಿಟ್ಟು - ೪ ಚಮಚ  ಬ್ರೆಡ್ ಕ್ರಮ್ಸ್ - ೨ ಚಮಚ ಜೀರಿಗೆ - ೧ ಚಮಚ ಮೊಟ್ಟೆ - ೩  ರಿಫೈನ್ಡ್ ಆಯಿಲ್ - ೧/೨ ಲೀಟರ್  ಉಪ್ಪು - ರುಚಿಗೆ ತಕ್ಕಷ್ಟು  ಮಾಡುವ ವಿಧಾನ    ಮೊದಲು ಚಿಕನ್ ಲೆಗ್ ಪೀಸ್ ಗೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಅರಶಿನ ಪುಡಿ, ಮೆಣಸಿನ ಪುಡಿ, ಸೋಯಾ ಸಾಸ್, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಡಿಸಿ ಮ...

ಚಂಪಾಕಲಿ (How to make champakali)

Image
ಚಂಪಾಕಲಿ ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ. ಚಂಪಾಕಲಿಯನ್ನು ಹಬ್ಬ- ಹರಿದಿನಗಳಲ್ಲಿ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇದನ್ನು ಒಮ್ಮೆ ಮಾಡಿ ತಿಂದರೆ ಪದೇ ಪದೇ ಮಾಡಿ ತಿನ್ನಬೇಕು ಅನ್ನುವಷ್ಟು ರುಚಿಯಾಗಿರುತ್ತದೆ. ಬನ್ನಿ ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ.  ಚಂಪಾಕಲಿಗೆ ಬೇಕಾಗುವ ಸಾಮಾಗ್ರಿಗಳು  ಹಾಲು - ೨ ಲೀಟರ್  ಹಾಲಿನ ಪುಡಿ - ೧೦೦ ಗ್ರಾಂ  ಅರಶಿನ ಬಣ್ಣ ( food color )  ನಿಂಬೆಹಣ್ಣು ಅಥವಾ ಸಿಟ್ರಿಕ್ ಆಸಿಡ್  ಸಕ್ಕರೆ - ೩೦೦ ಗ್ರಾಂ  ಮಾಡುವ ವಿಧಾನ   ಒಂದು ಪಾತ್ರೆಯಲ್ಲಿ ಎರಡು ಲೀಟರ್ ಹಾಲನ್ನು ಇಟ್ಟು ಮೀಡಿಯಂ  ಫ್ಲೇಮ್ ನಲ್ಲಿ ಹಾಲನ್ನು ಕುದಿಸಬೇಕು. ಹಾಲು ಒಂದು ಕುದಿ ಬಂದ ನಂತರ ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಿ, ಆ ಹಾಲಿಗೆ ಒಂದು ಚಮಚ ಸಿಟ್ರಿಕ್ ಆಸಿಡ್ ಅಥವಾ ಒಂದು ಲಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದಕ್ಕೆ ಕಾಲು ಲೋಟ ನೀರನ್ನು ಬೆರಸಿ ಹಾಲಿಗೆ ಹಾಕಿ ಚೆನ್ನಾಗಿ ಒಂದು ನಿಮಿಷ ಹಾಲನ್ನು ಬೆರೆಸಬೇಕು. ನಂತರ ಹಾಲು ಒಡೆಯಲು ಪ್ರಾರಂಭಿಸುತ್ತದೆ. ಆಗ ಆ ಹಾಲಿನಿಂದ  ಸಿಕ್ಕಿದಂತಹ ಗಟ್ಟಿಯಾದ ಪನ್ನೀರನ್ನು ತಕ್ಷಣ ಒಂದು ತೆಳು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ತಣ್ಣನೆ ನೀರಿನಲ್ಲಿ ಎರಡು ಬರಿ ತೊಳೆದುಕೊಳ್ಳಬೇಕು. ಅನಂತರ ಆ ಬಟ್ಟೆಯಲ್ಲಿದ್ದ ಪನ್ನೀರನ್...

ಹಣ್ಣಿನ ಕಸ್ಟರ್ಡ್ ( How to make custard )

Image
ಕಸ್ಟರ್ಡ್ ಅನ್ನು ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಕಸ್ಟರ್ಡ್ ಅನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಕಸ್ಟರ್ಡ್ ಅನ್ನು ಎಲ್ಲರು ಇಷ್ಟ ಪಡುತ್ತಾರೆ. ಊಟ ಆದ ನಂತರ dessert ರೂಪದಲ್ಲಿ ಇದನ್ನು ಸೇವಿಸುತ್ತೇವೆ. ಇದು ತಿನ್ನಲು ತುಂಬಾ ರುಚಿಕರವೂ ಕೂಡ. ಇದರಲ್ಲಿ ಕೆಲವೊಂದು ಹಣ್ಣುಗಳ ಮಿಶ್ರಣ ಇರುವುದರಿಂದ ಆರೋಗ್ಯಕರವೂ ಕೂಡ. ನೀವು ಕೂಡ ಕಸ್ಟರ್ಡ್ ಅನ್ನು ಮನೆಯಲ್ಲಿಯೇ ತಯಾರಿಸಿ. ಅದರ ರುಚಿಯನ್ನು ಸವಿಯಿರಿ.   ಕಸ್ಟರ್ಡ್ ಮಾಡಲು ಬೇಕಾಗುವ ಸಾಮಗ್ರಿಗಳು  ಹಾಲು - ೧ ಲೀಟರ್  ಕಸ್ಟರ್ಡ್ ಪುಡಿ - ೩ ಚಮಚ  ಸಕ್ಕರೆ - ರುಚಿಗೆ ತಕ್ಕಷ್ಟು  ತುಪ್ಪ  ಸೇಬು  ದ್ರಾಕ್ಷಿ  ದಾಳಿಂಬೆ ಕಿವಿ  ಸ್ಟ್ರಾಬೆರಿ  ಮಾವಿನಹಣ್ಣು   ಮಾಡುವ ವಿಧಾನ  ಮೊದಲಿಗೆ ಒಂದು ಲೀಟರ್ ಹಾಲನ್ನು ಗ್ಯಾಸ್ನಲ್ಲಿ ಬಿಸಿಯಾಗಲು ಇಡಿ. ತಕ್ಷಣವೇ ಅರ್ಧ ಲೋಟ ತಣ್ಣನೆ ಹಾಲಿಗೆ ಮೂರೂ ಚಮಚದಷ್ಟು ಕಸ್ಟರ್ಡ್ ಪೌಡರನ್ನು ಸೇರಿಸಿ. ಕಸ್ಟರ್ಡ್ ಪೌಡರ್ ಹಾಲಿನಲ್ಲಿ ಪೂರ್ಣವಾಗಿ ಮಿಕ್ಸ್ ಆದ ನಂತರ, ಗ್ಯಾಸ್ನಲ್ಲಿ ಆಗ ತಾನೇ ಕುದಿಯಲು ಇಟ್ಟಂತಹ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸಿಹಿಗೆ ಬೇಕಾದಷ್ಟು ಸಕ್ಕರೆಯನ್ನು ಹಾಕಿ, ಹಾಲು ಚೆನ್ನಾಗಿ ಕುದಿ ಬರುವ ವರೆಗೆ ಹಾಲನ್ನು ಒಂದು ಸ್ಪೂನ್ ನಿಂದ ಮಿಕ್ಸ್ ಮಾಡುತ್ತ ಇರಿ. ಹಾಲು ಚೆನ್ನಾಗಿ ಕುದಿ ಬಂದ ...

ಡಾಲ್ಗೊನಾ ಕಾಫಿ ( Dalgona coffee )

Image
ಡಾಲ್ಗೊನಾ ಕಾಫಿ ಮಾಡುವ ವಿಧಾನ ನಮಸ್ಕಾರ ವೀಕ್ಷಕರಿಗೆ. ಇವತ್ತಿನ ದಿನ ನಾವು ಡಾಲ್ಗೊನ ಕಾಫಿಯನ್ನು ಹೇಗೆ ಮಾಡೋದು ನೋಡೋಣ. ಡಾಲ್ಗೊನಾ ಕಾಫಿಯು ಕುಡಿಯಲು ತುಂಬಾ ರಚಿಯಾಗಿಯೂ ಮತ್ತು ಅದ್ಭುತವಾಗಿಯೂ ಇರುತ್ತದೆ. ಡಾಲ್ಗೊನಾ ಕಾಫಿಯು ಮೂಲತಃ ದಕ್ಷಿಣ ಕೊರಿಯಾದ್ದಾಗಿದೆ. ಈ ಕಾಪಿಯನ್ನು  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕುಡಿಯಲು ಇಷ್ಟ ಪಡುತ್ತಿದ್ದಾರೆ. ನಾನು ಈ ಕಾಫಿಯನ್ನು ಮನೆಯಲ್ಲಿಯೇ ತುಂಬಾ  ಸುಲಭವಾಗಿ ಹೇಗೆ ಮಾಡೋದು ಎಂದು ಇವತ್ತಿನ ರೆಸಿಪಿಯಲ್ಲಿ ಹೇಳುತ್ತೇನೆ. ಬನ್ನಿ ನಾವು ಈಗ ಡಾಲ್ಗೊನಾಕಾಫಿಯನ್ನು ಹೇಗೆ ಮಾಡೋದು ನೋಡೋಣ.   ಡಾಲ್ಗೊನಾ ಕಾಫಿಗೆ ಬೇಕಾಗುವ ಸಾಮಗ್ರಿಗಳು Nescafe ಇನ್ಸ್ಟಂಟ್ ಕಾಫಿ - ೨ ಚಮಚ  ಸಕ್ಕರೆ - ೨ ಚಮಚ  ಹಾಲು    ಮಾಡುವ ವಿಧಾನ  ಒಂದು ಲೋಟದಲ್ಲಿ ಎರಡು ಚಮಚ Nescafe ಇನ್ಸ್ಟಂಟ್ ಕಾಫಿಯನ್ನು ಹಾಕಿಕೊಳ್ಳಿ ಮತ್ತು ಎರಡು ಚಮಚ ಸಕ್ಕರೆಯನ್ನು ಹಾಕಿ, ಕಾಲು ಚಮಚ ನೀರನ್ನು ಹಾಕಿ ಒಂದು ಸ್ಪೂನ್ನಲ್ಲಿ ಚೆನ್ನಾಗಿ ಕ್ರೀಮ್ ಆಗುವ ವರೆಗೆ ಬೀಟ್ ಮಾಡಿ ಅಥವಾ ನೀವು ಬೀಟ್ ಮಾಡ್ಲಿಕ್ಕೆ ಹ್ಯಾಂಡ್ ಮಿಕ್ಸರ್ ಅಥವಾ ಎಗ್ ಬೀಟರ್ ಅನ್ನು ತೆಗೆದುಕೊಳ್ಳಬಹುದು. ನೀವು ಕೈನಲ್ಲಿ ಬೀಟ್ ಮಾಡುವುದಾದರೆ ಸುಮಾರು ಏಳರಿಂದ ಹತ್ತು ನಿಮಿಷಗಳವರೆಗೆ ಬೀಟ್ ಮಾಡಬೇಕಾಗುತ್ತದೆ. ಬೀಟ್ ಮಾಡೋವಾಗ ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ.  ಬೀಟ್ ಮಾಡಿ ಅದು ಫುಲ್ ಕ್ರೀಮ್ ನ...

ಪಾನಿಪುರಿಯ ಪೂರಿ ಮಾಡುವ ವಿಧಾನ ( How to make pani puri's puri)

Image
   ಪಾನಿಪುರಿಯ ಪೂರಿ ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ತುಂಬಾ ಕ್ರಿಸ್ಪಿ ಹಾಗು ತಿನ್ನಲು ತುಂಬಾ ರುಚಿ ರುಚಿಯಾಗಿರವಂತಹ ಪಾನಿ ಪುರಿಯ ಪೂರಿಯನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗು ಕೂಡ ಇಷ್ಟವಾಗುವಂತಹದ್ದು. ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿಯೇ ಮಾಡಿ ತಿಂದರೆ ಉತ್ತಮ. ಬೇಕಾದರೆ ನೀವು ಈ ಪೂರಿಗಳನ್ನುಮಾಡಿ  ಸುಮಾರು ೧೫ ರಿಂದ ೨೦ ದಿನಗಳವರೆಗೆ ಸ್ಟೋರ್ ಮಾಡಿ ಇಡಬಹುವುದು.  ಪಾನಿಪುರಿಯ ಪೂರಿಗೆ ಬೇಕಾಗುವ ಸಾಮಗ್ರಿಗಳು ಸೂಜಿರವ - ೨ ಕಪ್  ಗೋದಿಹಿಟ್ಟು  ಅಥವಾ ಮೈದಾಹಿಟ್ಟು - ೧ ಕಪ್  ರಿಫೈನ್ಡ್ ಆಯಿಲ್ - ೧/೨ ಲೀಟರ್ ಉಪ್ಪು - ರುಚಿಗೆ ತಕ್ಕಷ್ಟು    ಮಾಡುವ ವಿಧಾನ    ಎರಡು ಕಪ್ ಸೂಜಿ ರವಗೆ ಒಂದು ಕಪ್ ಗೋದಿಹಿಟ್ಟು ಅಥವಾ ಮೈದಾಹಿಟ್ಟು ( ಗೋದಿಹಿಟ್ಟು ಅಥವಾ ಮೈದಾಹಿಟ್ಟು ಎರಡರಲ್ಲಿ ಯಾವುದಾದರು ಒಂದನ್ನು ಬಳಸಿ) ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ  ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಸುಮಾರು ಹತ್ತು ನಿಮಿಷಗಳ ವರೆಗೆ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟನ್ನು ನಾದಿದ ನಂತರ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಸುಮಾರು ಹತ್ತು ನಿಮಿಷಗಳ ಕಾಲ...

ಶಾವಿಗೆ ಪಾಯಸ (How to make vermicelli kheer)

Image
ಶಾವಿಗೆ ಪಾಯಸವನ್ನು ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ರುಚಿ ರುಚಿಯಾದ ಶಾವಿಗೆ ಪಾಯಸವನ್ನು ಹೇಗೆ ಮಾಡೊದು ನೋಡೋಣ.  ಸಾಮಾನ್ಯವಾಗಿ ಶಾವಿಗೆ ಪಾಯಸವನ್ನು ಹಬ್ಬ-ಹರಿದಿನಗಳಲ್ಲಿ ಕೆಲವೊಂದು ವಿಶೇಷ ಸಂದರ್ಭದಲ್ಲಿ ಅಥವಾ ಹೀಗೇ ಮಾಡಿ ತಿನ್ನಬಹುದಾದಂತಹ ರೆಸಿಪಿ.  ಬನ್ನಿ ಈಗ ಶಾವಿಗೆ ಪಾಯಸ ಹೇಗೆ ಮಾಡೋದು ನೋಡೋಣ.  ಶಾವಿಗೆ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು  ಶಾವಿಗೆ -೧೦೦ ಗ್ರಾಂ ಸಕ್ಕರೆ - ರುಚಿಗೆ ತಕ್ಕಷ್ಟು ಹಾಲು- ೧/೨ ಲೀಟರ್ ತುಪ್ಪ- ೪ ರಿಂದ ೫ ಟೀ ಸ್ಪೂನ್  ಏಲಕ್ಕಿ - ೩ ರಿಂದ ೫ ದ್ರಾಕ್ಷಿ- ೫೦ ಗ್ರಾಂ ಗೋಡಂಬಿ - ೫೦ ಗ್ರಾಂ ಬಾದಾಮಿ - ೬ ಕೇಸರಿ ಎಸಳು - ೭ ರಿಂದ ೧೦ ಎಸಳುಗಳು           ಮಾಡುವ ವಿಧಾನ  ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ, ತುಪ್ಪ ಬಿಸಿಯಾದ ನಂತರ ಶಾವಿಗೆಯನ್ನು ಹಾಕಿ ಅದರ ಬಣ್ಣ ಸ್ವಲ್ಪ ಬದಲಾಗುವ ವರೆಗೆ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ನಂತರ ಆ ಶಾವಿಗೆಯನ್ನು ಬೇರೊಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಹಾಲನ್ನು ಕುದಿಸಬೇಕು. ಹಾಲು ಕುದಿಯುತ್ತಾ ಇರುವ ಹಾಗೆಯೇ ಹುರಿದಂತಹ  ಶಾವಿಗೆಯನ್ನು ಅದಕ್ಕೆ ಹಾಕಿ ಬೇಯುವ ತನಕ ಒಂದು ಚಮಚದಲ್ಲಿ ಶಾವಿಗೆಯನ್ನು ಕಲಡಿಸುತ್ತಾ ಇರಬೇಕು. ನಂತರ ಈಗಾಗಲೇ ಒಂದು ಗಂಟೆಯ ಮುಂಚೆಯೇ ಕಾಲು ಲೋಟ ಹಾಲಿನಲ್ಲಿ ನೆನಸಿ ಇಟ್ಟ ಕ...

ನಿಂಬೆಹಣ್ಣಿನ ಪಾನಕ (How to make lemon juice)

Image
ನಿಂಬೆಹಣ್ಣಿನ ಪಾನಕವನ್ನು ಮಾಡುವ ವಿದಾನ      ಬೇಕಾಗುವ ಸಾಮಾಗ್ರಿಗಳು  ನಿಂಬೆಹಣ್ಣು  ಸಕ್ಕರೆ ಏಲಕ್ಕಿ ಪುಡಿ  ಉಪ್ಪು    ಮಾಡುವ ವಿಧಾನ                        ಒಂದು  ಲೋಟ ನೀರನ್ನು ತೆಗೆದುಕೊಳ್ಳಿ , ಆ ನೀರಿಗೆ ಮಧ್ಯಮ ಗಾತ್ರದ ನಿಂಬೆಹಣ್ಣಿನ ರಸವನ್ನು   ಸೇರಿಸಿ . ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಒಂದು ಚುಟಿಕೆ ಉಪ್ಪನ್ನು  ಸೇರಿಸಿ ಮತ್ತು ಒಂದು ಚುಟಕೆಯಷ್ಟು ಏಲಕ್ಕಿ ಪುಡಿಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ . ಈಗ ನಿಂಬೆಹಣ್ಣಿನ ಪಾನಕ ಸವಿಯಲು ಸಿದ್ದ .  ನಿಂಬೆಹಣ್ಣಿನ ಪಾನಕ ಸೇವಿಸಿ, ಆಯಾಸವನ್ನು ದೂರಗೊಳಿಸಿ .