ಚಾಕಲೇಟ್ ಐಸ್ಕ್ರೀಮ್ (Home made chocolate ice cream )
ಚಾಕಲೇಟ್ ಐಸ್ಕ್ರೀಮ್ ಮಾಡುವ ವಿಧಾನ
ವೀಕ್ಷಕರಿಗೆ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಅನ್ನು ಹೇಗೆ ಮಾಡೋದು ನೋಡೋಣ. ಕೇವಲ ನಾಲ್ಕು ವಸ್ತುಗಳಿಂದ ಮನೆಯಲ್ಲಿಯೇ ಸುಲಭವಾಗಿ ಐಸ್ಕ್ರೀಮ್ ಅನ್ನು ತಯಾರಿಸಿಕೊಳ್ಳಬಹುದು. ಇದು ತುಂಬಾ ಟೇಸ್ಟಿ ಯಾಗಿಯೂ ಮತ್ತು ತುಂಬಾ ಕ್ರೀಮಿಯಾಗಿಯೂ ಇರುತ್ತದೆ. ಬನ್ನಿ ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಹೇಗೆ ಮಾಡೋದು ನೋಡೋಣ.
ಚಾಕಲೇಟ್ ಐಸ್ಕ್ರೀಮ್ ಗೆ ಬೇಕಾಗುವ ಸಾಮಾಗ್ರಿಗಳು
- ಅಮೂಲ್ ವಿಪ್ಪಿಂಗ್ ಕ್ರೀಮ್ - ೨೦೦ ಗ್ರಾಂ
- ಕಂಡೆನ್ಸ್ ಮಿಲ್ಕ್ - ೧೦೦ ಗ್ರಾಂ
- ಕೋಕೋ ಪೌಡರ್ - ೨ ಚಮಚ
- ಐಸಿಂಗ್ ಶುಗರ್ - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಹಾಕಿಕೊಳ್ಳಿ, ನಂತರ ಆ ಐಸ್ ಕ್ಯೂಬ್ಸ್ ಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯನ್ನು ಫ್ರಿಡ್ಜ್ ನಲ್ಲಿ ಇಟ್ಟು ಆ ಪಾತ್ರೆ ಸಂಪೂರ್ಣ ತಣ್ಣಗಾದ ಮೇಲೆ ತೆಗೆಯಿರಿ. ಐಸ್ ಕ್ಯೂಬ್ ಅನ್ನು ಹಾಕಿದಂತಹ ಪಾತ್ರೆಯ ಮೇಲೆ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಇಟ್ಟಂತಹ ಪಾತ್ರೆಯನ್ನು ಇಡಿರಿ. ನಂತರ ಆ ಪಾತ್ರೆಯಲ್ಲಿ ಅಮೂಲ್ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿಕೊಳ್ಳಿ. ಈ ರೀತಿ ಕ್ರೀಮ್ ಅನ್ನು ವಿಪ್ ಮಾಡುವುದರಿಂದ ಬೇಗ ಕ್ರೀಮ್ ಆಗುತ್ತದೆ ಮತ್ತು ಕ್ರೀಮ್ ಬಿಸಿಯಾಗುವುದಿಲ್ಲ, ಕೆಲವೊಮ್ಮೆ ಕ್ರೀಮ್ ಹ್ಯಾಂಡ್ ಮಿಕ್ಸರ್ ಇಂದ ಬೀಟ್ ಮಾಡುವುದರಿಂದ ಅದು ಕ್ರೀಮಿ ಟೆಕ್ಸ್ಚರ್ ಗೆ ಬರುವುದಿಲ್ಲ. ಈ ವಿಧಾನ ಅನುಸರಿಸುವುದರಿಂದ ವಿಪ್ಪಿಂಗ್ ಕ್ರೀಮ್ ತುಂಬಾ ಸಾಫ್ಟ್ ಆಗಿ ಮತ್ತು ಕ್ರೀಮಿ ಆಗಿ ಬರುತ್ತದೆ.
ಅಮೂಲ್ ವಿಪ್ಪಿಂಗ್ ಕ್ರೀಮ್ ಅನ್ನು ಹ್ಯಾಂಡ್ ಮಿಕ್ಸರ್ ಇಂದ ಸುಮಾರು ಇಪ್ಪತ್ತು ನಿಮಿಷಗಳ ಕಾಲ ವಿಪ್ ಮಾಡಿಕೊಳ್ಳಬೇಕು. ಆ ಕ್ರೀಮ್ ಗೆ ರುಚಿಗೆ ತಕ್ಕಷ್ಟು ಐಸಿಂಗ್ ಶುಗರ್ ಅನ್ನು ಹಾಕಿಕೊಂಡು ಬೀಟ್ ಮಾಡಬೇಕು. ಬೀಟ್ ಮಾಡುತ್ತಿರುವಂತಹ ವಿಪ್ಪಿಂಗ್ ಕ್ರೀಮ್ ಮೊದಲಿರುವುದಕ್ಕಿಂತ ಎರಡರಷ್ಟು ಆಗುತ್ತದೆ ಮತ್ತು ತುಂಬಾ ಕ್ರೀಮಿ ಟೆಕ್ಸ್ಚರ್ ಬರುತ್ತದೆ.ನಂತರ ಅದಕ್ಕೆ ಕಂಡೆನ್ಸ ಮಿಲ್ಕ್ ಮತ್ತು ಎರಡು ಚಮಚ ಕೋಕೋ ಪೌಡರ್ ಅನ್ನು ಹಾಕಿಕೊಳ್ಳಿ. ಅದನ್ನು ಒಂದು ಚಮಚದ ಸಹಾಯದಿಂದ ವಿಪ್ಪಿಂಗ್ ಕ್ರೀಮ್, ಕಂಡೆನ್ಸ ಮಿಲ್ಕ್ ಮತ್ತು ಕೋಕೋ ಪೌಡರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಏರ್ ಟೈಟ್ ಕಂಟೇನರ್ ಗೆ ಹಾಕಿ ಫ್ರೀಜರ್ ನಲ್ಲಿ ಸುಮಾರು ಮೂರೂ ಗಂಟೆಗಳ ವರೆಗೆ ಇಡಿ. ನಂತರ ಫ್ರಿಡ್ಜ್ ನಲ್ಲಿ ಇಟ್ಟಂತಹ ಐಸ್ ಕ್ರೀಮ್ ಅನ್ನು ಇನ್ನೊಮ್ಮೆ ತೆಗೆದು ಹ್ಯಾಂಡ್ ಮಿಕ್ಸರ್ ನಲ್ಲಿ ಐದು ನಿಮಿಷಗಳ ವರೆಗೆ ಬೀಟ್ ಮಾಡಿಕೊಳ್ಳಿ. ಹೀಗೆ ಅದನ್ನು ಇನ್ನೊಮ್ಮೆ ಬೀಟ್ ಮಾಡುವುದರಿಂದ ಐಸ್ ಕ್ರೀಮ್ ತುಂಬಾ ಕ್ರೀಮಿ ಯಾಗಿ ಬರುತ್ತದೆ. ಪುನಃ ಐಸ್ ಕ್ರೀಮ್ ಅನ್ನು ಏರ್ ಟೈಟ್ ಕಂಟೇನರ್ ಗೆ ಹಾಕಿ ಫ್ರೀಜರ್ ನಲ್ಲಿ ಸುಮಾರು ೮ ರಿಂದ ೧೦ ಗಂಟೆಗಳ ವರೆಗೆ ಇಡಿ. ನಂತರ ಐಸ್ ಕ್ರೀಮ್ ಅನ್ನು ಫ್ರೀಜರ್ ಇಂದ ಹೊರಗೆ ತೆಗೆದು ಐದು ನಿಮಿಷ ಬಿಟ್ಟು ಐಸ್ ಕ್ರೀಮ್ ಅನ್ನು ಸರ್ವ್ ಮಾಡಿಕೊಳ್ಳಿ.
ಬೇಕಾದರೆ ಐಸ್ ಕ್ರೀಮ್ ಮೇಲೆ ಚಾಕಲೇಟ್ ಚಿಪ್ಸ್ ಅಥವಾ ಚಾಕಲೇಟ್ ಸಿರಪ್ ಅನ್ನು ಹಾಕಿಕೊಳ್ಳಬಹುದು. ಈಗ ರುಚಿ ರುಚಿಯಾದ ಚಾಕಲೇಟ್ ಐಸ್ ಕ್ರೀಮ್ ಸವಿಯಲು ಸಿದ್ದ.



Comments
Post a Comment