ಪಾನಿಪುರಿಯ ಪೂರಿ ಮಾಡುವ ವಿಧಾನ ( How to make pani puri's puri)

 

 ಪಾನಿಪುರಿಯ ಪೂರಿ ಮಾಡುವ ವಿಧಾನ 

ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ತುಂಬಾ ಕ್ರಿಸ್ಪಿ ಹಾಗು ತಿನ್ನಲು ತುಂಬಾ ರುಚಿ ರುಚಿಯಾಗಿರವಂತಹ ಪಾನಿ ಪುರಿಯ ಪೂರಿಯನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗು ಕೂಡ ಇಷ್ಟವಾಗುವಂತಹದ್ದು. ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿಯೇ ಮಾಡಿ ತಿಂದರೆ ಉತ್ತಮ. ಬೇಕಾದರೆ ನೀವು ಈ ಪೂರಿಗಳನ್ನುಮಾಡಿ  ಸುಮಾರು ೧೫ ರಿಂದ ೨೦ ದಿನಗಳವರೆಗೆ ಸ್ಟೋರ್ ಮಾಡಿ ಇಡಬಹುವುದು. 

ಪಾನಿಪುರಿಯ ಪೂರಿಗೆ ಬೇಕಾಗುವ ಸಾಮಗ್ರಿಗಳು

  • ಸೂಜಿರವ - ೨ ಕಪ್ 
  • ಗೋದಿಹಿಟ್ಟು  ಅಥವಾ ಮೈದಾಹಿಟ್ಟು - ೧ ಕಪ್ 
  • ರಿಫೈನ್ಡ್ ಆಯಿಲ್ - ೧/೨ ಲೀಟರ್
  • ಉಪ್ಪು - ರುಚಿಗೆ ತಕ್ಕಷ್ಟು   


ಮಾಡುವ ವಿಧಾನ


  

ಎರಡು ಕಪ್ ಸೂಜಿ ರವಗೆ ಒಂದು ಕಪ್ ಗೋದಿಹಿಟ್ಟು ಅಥವಾ ಮೈದಾಹಿಟ್ಟು ( ಗೋದಿಹಿಟ್ಟು ಅಥವಾ ಮೈದಾಹಿಟ್ಟು ಎರಡರಲ್ಲಿ ಯಾವುದಾದರು ಒಂದನ್ನು ಬಳಸಿ) ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ  ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಸುಮಾರು ಹತ್ತು ನಿಮಿಷಗಳ ವರೆಗೆ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟನ್ನು ನಾದಿದ ನಂತರ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಸುಮಾರು ಹತ್ತು ನಿಮಿಷಗಳ ಕಾಲ ಒಂದು ತೇವಾಂಶವಿರುವ ಕಾಟನ್ ಬಟ್ಟೆಯನ್ನು ಹಿಟ್ಟಿನ ಮೇಲೆ ಮುಚ್ಚಬೇಕು. ಹತ್ತು ನಿಮಿಷಗಳ ಬಳಿಕ ಪುನಃ ಹಿಟ್ಟನ್ನು ಸ್ವಲ್ಪ ನಾದಿ ಆ ಹಿಟ್ಟನ್ನು ಸಣ್ಣ ಸಣ್ಣ  ಉಂಡೆಗಳನ್ನಾಗಿ ಮಾಡಿ ಇಟ್ಟುಕೊಳ್ಳಿ. ನಂತರ ಆ ಹಿಟ್ಟಿನ ಉಂಡೆಗಳನ್ನು ಸಣ್ಣ ಗಾತ್ರದಲ್ಲಿ ಲಟ್ಟಿಸಿಕೊಳ್ಳಿ. ನಂತರ ಗ್ಯಾಸಲ್ಲಿ ರಿಫೈನ್ಡ್ ಎಣ್ಣೆಯನ್ನು ಕಾಯಲು ಇಡಿ . ಎಣ್ಣೆ ಬಿಸಿಯಾದ ನಂತರ  ಲಟ್ಟಿಸಿಕೊಂಡತಹ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿ ಎರಡು ಕಡೆ ಗೋಲ್ಡನ್ ಕಲರ್ ಬರುವ ಹಾಗೆ ಲೊ ಫ್ಲೇಮ್ನಲ್ಲಿ ಇಟ್ಟು ಹುರಿದುಕೊಳ್ಳಿ. ನಂತರ ಪುರಿಯನ್ನು ತೆಗೆದು ಒಂದು ಟಿಶ್ಯೂ ಪೇಪರ್ಗೆ ಹಾಕಿಕೊಳ್ಳಿ. ಪೂರಿಗಳಲ್ಲಿ ಎಣ್ಣೆಯ ಅಂಶ ಸ್ವಲ್ಪ ಇಳಿದ ಮೇಲೆ ಅದನ್ನು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಮುಚ್ಚಿಡಿ. ಬೇಕಾದಾಗ ಪೂರಿಗಳನ್ನು ಬಳಸಿಕೊಳ್ಳಿ. ಪಾನಿಪುರಿಯ ಸ್ವಾದವನ್ನು ಆನಂದಿಸಿಕೊಳ್ಳಿ.

 

Comments

Popular posts from this blog

ಚಂಪಾಕಲಿ (How to make champakali)

KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )

ಹಣ್ಣಿನ ಕಸ್ಟರ್ಡ್ ( How to make custard )