KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )
KFC ತರಹದ ಚಿಕನ್ ಲೆಗ್ ಪೀಸ್ ಮಾಡುವ ವಿಧಾನ ನಮಸ್ಕಾರ ನನ್ನ ವೀಕ್ಷಕರಿಗೆ. ಇವತ್ತಿನ ದಿನ ನಾವು ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ. ಇದಕ್ಕೆ ಚಿಕನ್ ಫಿಂಗರ್ಸ್ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ, ಪಾರ್ಟಿ ಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಮಾಡುತ್ತೇವೆ. ಇದು ತಿನ್ನಲು ಹೊರಗಿಂದ ಕ್ರಂಚಿ ಒಳಗಿಂದ ಜ್ಯೂಸಿ ಮತ್ತು ತುಂಬಾ ಕ್ರಿಸ್ಪಿಯಾಗಿರುತ್ತದೆ. ಬನ್ನಿ ಈಗ ನಾವು KFC ಸ್ಟೈಲ್ ನಲ್ಲಿ ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ. ಚಿಕನ್ ಲೆಗ್ ಪೀಸ್ ಗೆ ಬೇಕಾಗುವ ಸಾಮಗ್ರಿಗಳು ಚಿಕನ್ ಲೆಗ್ ಪೀಸ್ - ೧೨ ಶುಂಠಿ ಬೆಳ್ಳುಳ್ಳಿ ಪೇಸ್ಟ್ - ೧ ಚಮಚ ಮೆಣಸಿನ ಪುಡಿ - ೧ ಚಮಚ ಕಾಳುಮೆಣಸಿನ ಪುಡಿ - ೧ ಚಮಚ ಅರಶಿನ ಪುಡಿ - ೧/೨ ಚಮಚ ಮೊಸರು - ೫೦ ಗ್ರಾಂ ಸೋಯಾ ಸಾಸ್ - ೧ ಚಮಚ ಕಾರ್ನ್ ಫ್ಲೋರ್ - ೨ ಚಮಚ ಮೈದಾ ಹಿಟ್ಟು - ೪ ಚಮಚ ಬ್ರೆಡ್ ಕ್ರಮ್ಸ್ - ೨ ಚಮಚ ಜೀರಿಗೆ - ೧ ಚಮಚ ಮೊಟ್ಟೆ - ೩ ರಿಫೈನ್ಡ್ ಆಯಿಲ್ - ೧/೨ ಲೀಟರ್ ಉಪ್ಪು - ರುಚಿಗೆ ತಕ್ಕಷ್ಟು ಮಾಡುವ ವಿಧಾನ ಮೊದಲು ಚಿಕನ್ ಲೆಗ್ ಪೀಸ್ ಗೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಅರಶಿನ ಪುಡಿ, ಮೆಣಸಿನ ಪುಡಿ, ಸೋಯಾ ಸಾಸ್, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಡಿಸಿ ಮ...