ಡಾಲ್ಗೊನಾ ಕಾಫಿ ( Dalgona coffee )
- Get link
- X
- Other Apps
ಡಾಲ್ಗೊನಾ ಕಾಫಿ ಮಾಡುವ ವಿಧಾನ
ನಮಸ್ಕಾರ ವೀಕ್ಷಕರಿಗೆ. ಇವತ್ತಿನ ದಿನ ನಾವು ಡಾಲ್ಗೊನ ಕಾಫಿಯನ್ನು ಹೇಗೆ ಮಾಡೋದು ನೋಡೋಣ. ಡಾಲ್ಗೊನಾ ಕಾಫಿಯು ಕುಡಿಯಲು ತುಂಬಾ ರಚಿಯಾಗಿಯೂ ಮತ್ತು ಅದ್ಭುತವಾಗಿಯೂ ಇರುತ್ತದೆ. ಡಾಲ್ಗೊನಾ ಕಾಫಿಯು ಮೂಲತಃ ದಕ್ಷಿಣ ಕೊರಿಯಾದ್ದಾಗಿದೆ. ಈ ಕಾಪಿಯನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕುಡಿಯಲು ಇಷ್ಟ ಪಡುತ್ತಿದ್ದಾರೆ. ನಾನು ಈ ಕಾಫಿಯನ್ನು ಮನೆಯಲ್ಲಿಯೇ ತುಂಬಾ ಸುಲಭವಾಗಿ ಹೇಗೆ ಮಾಡೋದು ಎಂದು ಇವತ್ತಿನ ರೆಸಿಪಿಯಲ್ಲಿ ಹೇಳುತ್ತೇನೆ. ಬನ್ನಿ ನಾವು ಈಗ ಡಾಲ್ಗೊನಾಕಾಫಿಯನ್ನು ಹೇಗೆ ಮಾಡೋದು ನೋಡೋಣ.
ಡಾಲ್ಗೊನಾ ಕಾಫಿಗೆ ಬೇಕಾಗುವ ಸಾಮಗ್ರಿಗಳು
- Nescafe ಇನ್ಸ್ಟಂಟ್ ಕಾಫಿ - ೨ ಚಮಚ
- ಸಕ್ಕರೆ - ೨ ಚಮಚ
- ಹಾಲು
ಮಾಡುವ ವಿಧಾನ
ಒಂದು ಲೋಟದಲ್ಲಿ ಎರಡು ಚಮಚ Nescafe ಇನ್ಸ್ಟಂಟ್ ಕಾಫಿಯನ್ನು ಹಾಕಿಕೊಳ್ಳಿ ಮತ್ತು ಎರಡು ಚಮಚ ಸಕ್ಕರೆಯನ್ನು ಹಾಕಿ, ಕಾಲು ಚಮಚ ನೀರನ್ನು ಹಾಕಿ ಒಂದು ಸ್ಪೂನ್ನಲ್ಲಿ ಚೆನ್ನಾಗಿ ಕ್ರೀಮ್ ಆಗುವ ವರೆಗೆ ಬೀಟ್ ಮಾಡಿ ಅಥವಾ ನೀವು ಬೀಟ್ ಮಾಡ್ಲಿಕ್ಕೆ ಹ್ಯಾಂಡ್ ಮಿಕ್ಸರ್ ಅಥವಾ ಎಗ್ ಬೀಟರ್ ಅನ್ನು ತೆಗೆದುಕೊಳ್ಳಬಹುದು. ನೀವು ಕೈನಲ್ಲಿ ಬೀಟ್ ಮಾಡುವುದಾದರೆ ಸುಮಾರು ಏಳರಿಂದ ಹತ್ತು ನಿಮಿಷಗಳವರೆಗೆ ಬೀಟ್ ಮಾಡಬೇಕಾಗುತ್ತದೆ. ಬೀಟ್ ಮಾಡೋವಾಗ ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ. ಬೀಟ್ ಮಾಡಿ ಅದು ಫುಲ್ ಕ್ರೀಮ್ ನ ರೀತಿಯಲ್ಲಿ ಬಂದ ನಂತರ ಅದಕ್ಕೆ ಹಾಲನ್ನು ಹಾಕಿ ಅದರ ಮೇಲೆ ಸ್ವಲ್ಪ ಕಾಫಿ ಪುಡಿಯನ್ನು ಸ್ಪ್ರೇ ಮಾಡಿ ಅಲಂಕರಿಸಿ, ಡಾಲ್ಗೊನ ಕಾಫಿಯಾ ರುಚಿಯನ್ನು ಸವಿಯಿರಿ. ಮನಸ್ಸಿಗೆ ಆನಂದ ತಂದುಕೊಳ್ಳಿ.
- Get link
- X
- Other Apps


Comments
Post a Comment