Posts

Showing posts with the label chaats

ಪಾನಿಪುರಿಯ ಪೂರಿ ಮಾಡುವ ವಿಧಾನ ( How to make pani puri's puri)

Image
   ಪಾನಿಪುರಿಯ ಪೂರಿ ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ತುಂಬಾ ಕ್ರಿಸ್ಪಿ ಹಾಗು ತಿನ್ನಲು ತುಂಬಾ ರುಚಿ ರುಚಿಯಾಗಿರವಂತಹ ಪಾನಿ ಪುರಿಯ ಪೂರಿಯನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗು ಕೂಡ ಇಷ್ಟವಾಗುವಂತಹದ್ದು. ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿಯೇ ಮಾಡಿ ತಿಂದರೆ ಉತ್ತಮ. ಬೇಕಾದರೆ ನೀವು ಈ ಪೂರಿಗಳನ್ನುಮಾಡಿ  ಸುಮಾರು ೧೫ ರಿಂದ ೨೦ ದಿನಗಳವರೆಗೆ ಸ್ಟೋರ್ ಮಾಡಿ ಇಡಬಹುವುದು.  ಪಾನಿಪುರಿಯ ಪೂರಿಗೆ ಬೇಕಾಗುವ ಸಾಮಗ್ರಿಗಳು ಸೂಜಿರವ - ೨ ಕಪ್  ಗೋದಿಹಿಟ್ಟು  ಅಥವಾ ಮೈದಾಹಿಟ್ಟು - ೧ ಕಪ್  ರಿಫೈನ್ಡ್ ಆಯಿಲ್ - ೧/೨ ಲೀಟರ್ ಉಪ್ಪು - ರುಚಿಗೆ ತಕ್ಕಷ್ಟು    ಮಾಡುವ ವಿಧಾನ    ಎರಡು ಕಪ್ ಸೂಜಿ ರವಗೆ ಒಂದು ಕಪ್ ಗೋದಿಹಿಟ್ಟು ಅಥವಾ ಮೈದಾಹಿಟ್ಟು ( ಗೋದಿಹಿಟ್ಟು ಅಥವಾ ಮೈದಾಹಿಟ್ಟು ಎರಡರಲ್ಲಿ ಯಾವುದಾದರು ಒಂದನ್ನು ಬಳಸಿ) ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ  ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಸುಮಾರು ಹತ್ತು ನಿಮಿಷಗಳ ವರೆಗೆ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟನ್ನು ನಾದಿದ ನಂತರ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಸುಮಾರು ಹತ್ತು ನಿಮಿಷಗಳ ಕಾಲ...