Posts

Showing posts with the label sweets

ಕುಚ್ಚಿಲಕ್ಕಿ ಲಡ್ಡು (How to make boiled rice laddu)

Image
ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ  ಎಲ್ಲರಿಗೂ ನನ್ನ  ನಮಸ್ಕಾರಗಳು ಇವತ್ತಿನ ದಿನ  ನಾವು ರುಚಿ ರುಚಿಯಾದ ಕುಚ್ಚಿಲಕ್ಕಿ ಲಡ್ಡುವನ್ನು ಮಾಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಿ ಒಂದರಿಂದ ಎರಡು  ತಿಂಗಳವರೆಗೆ ಶೇಖರಿಸಿ ಕೂಡ ಇಡಬಹುದು. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಒಂದು ಸಿಹಿ ತಿನಿಸು ಆಗಿದೆ. ಇದು ಆರೋಗ್ಯಕ್ಕೆ ಉತ್ತಮ ಕೂಡ.  ನೀವು ಕೂಡ ಇದನ್ನು ಮಾಡಿ ರುಚಿಯನ್ನು ಸವಿಯಿರಿ.  ಕುಚ್ಚಿಲಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು  ಕುಚ್ಚಿಲಕ್ಕಿ ( ಕೆಂಪು ಅಕ್ಕಿ ) - ೧ ಕೆ.ಜಿ  ಹೆಸರು ಕಾಳು - ೧/೪ ಕೆ.ಜಿ  ಬಿಳಿ ಎಳ್ಳು - ೧೦೦ ಗ್ರಾಂ  ಬೆಲ್ಲ - ೧/೨ ಕೆ.ಜಿ  ಗೋಡಂಬಿ - ೧೦೦ ಗ್ರಾಂ  ಏಲಕ್ಕಿ ಪುಡಿ - ೧೦ ಗ್ರಾಂ  ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ   ಒಂದು ಕಾವಲಿಯಲ್ಲಿ ಕುಚ್ಚಿಲಕ್ಕಿಯನ್ನು ಚೆನ್ನಾಗಿ ಅರಳುವ ತನಕ ಹುರಿದುಕೊಳ್ಳಿ. ನಂತರ ಕಾವಲಿಯಲ್ಲಿ ಹೆಸರು ಕಾಳು ಸ್ವಲ್ಪ ಗಟ್ಟಿಯಾಗುವ ತನಕ ಹುರಿದುಕೊಳ್ಳಿ. ಹಾಗೆಯೆ ಎಳ್ಳನ್ನು ಕೂಡ ಸ್ವಲ್ಪ ಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಹುರಿದು ಕೊಂಡಿದ್ದ ಕುಚ್ಚಿಲಕ್ಕಿ ಮತ್ತು ಹೆಸರು ಕಾಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.    ಈಗ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಬಿಸಿ ಮಾಡಲು ಇಡಿ, ಅದಕ್ಕೆ ಅರ್ಧ ಲೀಟರ್ ನೀರನ್ನು ...