KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )
KFC ತರಹದ ಚಿಕನ್ ಲೆಗ್ ಪೀಸ್ ಮಾಡುವ ವಿಧಾನ
ನಮಸ್ಕಾರ ನನ್ನ ವೀಕ್ಷಕರಿಗೆ. ಇವತ್ತಿನ ದಿನ ನಾವು ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ. ಇದಕ್ಕೆ ಚಿಕನ್ ಫಿಂಗರ್ಸ್ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ, ಪಾರ್ಟಿ ಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಮಾಡುತ್ತೇವೆ. ಇದು ತಿನ್ನಲು ಹೊರಗಿಂದ ಕ್ರಂಚಿ ಒಳಗಿಂದ ಜ್ಯೂಸಿ ಮತ್ತು ತುಂಬಾ ಕ್ರಿಸ್ಪಿಯಾಗಿರುತ್ತದೆ. ಬನ್ನಿ ಈಗ ನಾವು KFC ಸ್ಟೈಲ್ ನಲ್ಲಿ ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ.
ಚಿಕನ್ ಲೆಗ್ ಪೀಸ್ ಗೆ ಬೇಕಾಗುವ ಸಾಮಗ್ರಿಗಳು
- ಚಿಕನ್ ಲೆಗ್ ಪೀಸ್ - ೧೨
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - ೧ ಚಮಚ
- ಮೆಣಸಿನ ಪುಡಿ - ೧ ಚಮಚ
- ಕಾಳುಮೆಣಸಿನ ಪುಡಿ - ೧ ಚಮಚ
- ಅರಶಿನ ಪುಡಿ - ೧/೨ ಚಮಚ
- ಮೊಸರು - ೫೦ ಗ್ರಾಂ
- ಸೋಯಾ ಸಾಸ್ - ೧ ಚಮಚ
- ಕಾರ್ನ್ ಫ್ಲೋರ್ - ೨ ಚಮಚ
- ಮೈದಾ ಹಿಟ್ಟು - ೪ ಚಮಚ
- ಬ್ರೆಡ್ ಕ್ರಮ್ಸ್ - ೨ ಚಮಚ
- ಜೀರಿಗೆ - ೧ ಚಮಚ
- ಮೊಟ್ಟೆ - ೩
- ರಿಫೈನ್ಡ್ ಆಯಿಲ್ - ೧/೨ ಲೀಟರ್
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಚಿಕನ್ ಲೆಗ್ ಪೀಸ್ ಗೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಅರಶಿನ ಪುಡಿ, ಮೆಣಸಿನ ಪುಡಿ, ಸೋಯಾ ಸಾಸ್, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಡಿಸಿ ಮೆರಿನೇಟ್ ಮಾಡಿ ಹಿಂದಿನ ರಾತ್ರಿ ಫ್ರಿಡ್ಜ್ ನಲ್ಲಿ ಇಡಬೇಕು. ನಂತರ ಲೆಗ್ ಪೀಸ್ ಮಾಡುವ ದಿನ ಫ್ರಿಡ್ಜ್ ನಿಂದ ತೆಗೆದು ಇಟ್ಟುಕೊಳ್ಳಬೇಕು.
ಒಂದು ಬೌಲ್ ನಲ್ಲಿ ೪ ಚಮಚ ಮೈದಾ ಹಿಟ್ಟು , ೨ ಚಮಚ ಬ್ರೆಡ್ ಕ್ರಮ್ಸ್ , ೨ ಚಮಚ ಕಾರ್ನ್ ಫ್ಲೋರ್, ೧ ಚಮಚ ಜೀರಿಗೆ, ೧/೨ ಚಮಚ ಕಾಳುಮೆಣಸಿನ ಪುಡಿ, ೧/೨ ಚಮಚ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ನೀರಿನ ಅಂಶವನ್ನು ಸೇರಿಸಬೇಡಿ. ಮತ್ತೊಂದು ಬೌಲ್ನಲ್ಲಿ ಮೂರು ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಇಟ್ಟುಕೊಳ್ಳಿ.
ನಂತರ ಮೆರಿನೇಟ್ ಮಾ ಡಿ ಇಟ್ಟುಕೊಂಡಂತಹ ಚಿಕನ್ ಲೆಗ್ ಪೀಸ್ ಅನ್ನು ತೆಗೆದುಕೊಳ್ಳಿ. ನಂತರ ಅದನ್ನು ಹಿಟ್ಟಿನ ಮಿಶ್ರಣಕ್ಕೆ ಹಾಕಿ ರೋಲ್ ಮಾಡಿಕೊಳ್ಳಿ, ನಂತರ ಅದೇ ಲೆಗ್ ಪೀಸ್ ಅನ್ನು ಮೊಟ್ಟೆಯ ಮಿಶ್ರಣಕ್ಕೆ ,ಮುಳುಗಿಸಿಕೊಳ್ಳಿ, ಪುನಃ ಅದೇ ಲೆಗ್ ಪೀಸ್ ಅನ್ನು ಹಿಟ್ಟಿನ ಮಿಶ್ರಣದಲ್ಲಿ ರೋಲ್ ಮಾಡಿ, ಕಾಡಿದಂತಹ ರಿಫೈನ್ಡ್ ಆಯಿಲ್ ನಲ್ಲಿ ಸ್ಲೋ ಟು ಮೀಡಿಯಂ ಫ್ಲೇಮ್ ನಲ್ಲಿ ಗೋಲ್ಡನ್ ಬಣ್ಣ ಬರುವ ವರೆಗೆ ಕರಿಯಬೇಕು. ಲೆಗ್ ಪೀಸ್ ಬೆಂದು ಗೋಲ್ಡನ್ ಕಲರ್ ಬಂದ ನಂತರ ಅದನ್ನು ತೆಗೆದು ಒಂದು ಪ್ಲೇಟ್ಗೆ ಹಾಕಿಕೊಳ್ಳಿ. ಈಗ KFC ತರಹದ ಚಿಕನ್ ಲೆಗ್ ಪೀಸ್ ಸವಿಯಲು ಸಿದ್ದ.

Comments
Post a Comment