ಕುಂಬಳಕಾಯಿ ಶರಬತ್ (How to make Ash Melon Juice)
ಕುಂಬಳಕಾಯಿ ಶರಬತ್ ಮಾಡುವ ವಿಧಾನ
ಎಲ್ಲರಿಗೂ ನನ್ನ ನಮಸ್ಕಾರಗಳು ಇವತ್ತಿನ ದಿನ ನಾವು ಕುಂಬಳಕಾಯಿ ಶರಬತ್ ಹೇಗೆ ಮಾಡೋದು ಎಂದು ನೋಡೋಣ. ಈ ಕುಂಬಳಕಾಯಿ ಪಾನೀಯ ದೇಹಕ್ಕೆ ತುಂಬಾ ಆರೋಗ್ಯಕರವಾಗಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತುಂಬಾ ಪರಿಣಾಮಕಾರಿಯಾಗಿರುತ್ತೆದೆ, ಈ ಪಾನೀಯ ಶುಗರ್, ಬಿ.ಪಿ, ಜೀರ್ಣಕ್ರಿಯೆ ಮತ್ತು ಶರೀರದ ತೂಕವನ್ನು ಸಮತೋಲನವಾಗಿ ಇಡಲು ಸಹಕಾರಿಯಾಕಗಿದೆ. ಇದನ್ನು ಸಣ್ಣವರಿಂದ ಹಿಡಿದು ದೊಡ್ಡವರವೆರೆಗೂ ಕೂಡ ಸೇವಿಸಬಹುದು, ಬನ್ನಿ ಈಗ ಕುಂಬಳಕಾಯಿ ಪಾನೀಯ ಹೇಗೆ ಮಾಡೋದು ನೋಡೋಣ.
ಕುಂಬಳಕಾಯಿ ಶರಬತ್ ಮಾಡಲು ಬೇಕಾಗುವ ಸಾಮಗ್ರಿಗಳು :
- ಬೂದು ಕುಂಬಳಕಾಯಿ - ೧/೨ ಕೆ.ಜಿ.
- ಲಿಂಬೆ ಹಣ್ಣು - ೧/೨ ತುಂಡು
- ಪುದೀನ ಎಲೆ - ೦೨ ಎಲೆ
ಕುಂಬಳಕಾಯಿ ಶರಬತ್ ಮಾಡಲು ವಿಧಾನ :
ಬೂದು ಕುಂಬಳಕಾಯಿಯ ಸಿಪ್ಪೆಯನ್ನು ತೆಗೆದು, ಅದರ ಒಳಗಿನ ಬೀಜದ ತಿರುಳನ್ನು ತೆಗೆದು, ನಂತರ ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಮಿಕ್ಸರ್ ನಲ್ಲಿ ಕತ್ತರಿಸಿದ ಕುಂಬಳಕಾಯಿಯ ತುಂಡುಗಳನ್ನು ಹಾಕಿ ಚೆನ್ನಾಗಿ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ, ಈಗ ರುಬ್ಬಿದ ಪೇಸ್ಟನ್ನು ಒಂದು ಶುಚಿಯಾದ ಹಾಗೂ ಬಿಳಿ ಬಟ್ಟೆಯ ಸಹಾಯದಿಂದ ಚೆನ್ನಾಗಿ ಹಿಂಡಿ ರಸವನ್ನು ತೆಗೆದುಕೊಳ್ಳಿ ಇದಕ್ಕೆ ನೀರನ್ನು ಸೆರೆಸಿಕೊಳ್ಳುವ ಅಗತ್ಯವಿಲ್ಲ.
ಈಗ ಕುಂಬಳಕಾಯಿ ರಸಕ್ಕೆ ಅರ್ಧ ಲಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ ನಂತರ ಒಂದು ಗ್ಲಾಸ್ ನಲ್ಲಿ ಕುಂಬಳಕಾಯಿ ತಂಪುಪಾನೀಯವನ್ನು ಹಾಕಿರಿ ಅದರ ರುಚಿಯನ್ನು ಹೆಚ್ಚಿಸಲು ೨ ಎಲೆ ಪುದಿನಾ ಸೊಪ್ಪನ್ನು ಮೇಲಿನಿಂದ ಅಲಂಕರಿಸಿರಿ.
ಈಗ ತಂಪಾದ ಹಾಗೂ ಆರೋಗ್ಯಕ್ಕೆ ಉತ್ತಮವಾದ ಬೂದು ಕುಂಬಳಕಾಯಿಯ ತಂಪುಪಾನೀಯ ಸವಿಯಲು ಸಿದ್ದ.


Comments
Post a Comment