ಚಂಪಾಕಲಿ (How to make champakali)
ಚಂಪಾಕಲಿ ಮಾಡುವ ವಿಧಾನ ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ. ಚಂಪಾಕಲಿಯನ್ನು ಹಬ್ಬ- ಹರಿದಿನಗಳಲ್ಲಿ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇದನ್ನು ಒಮ್ಮೆ ಮಾಡಿ ತಿಂದರೆ ಪದೇ ಪದೇ ಮಾಡಿ ತಿನ್ನಬೇಕು ಅನ್ನುವಷ್ಟು ರುಚಿಯಾಗಿರುತ್ತದೆ. ಬನ್ನಿ ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ. ಚಂಪಾಕಲಿಗೆ ಬೇಕಾಗುವ ಸಾಮಾಗ್ರಿಗಳು ಹಾಲು - ೨ ಲೀಟರ್ ಹಾಲಿನ ಪುಡಿ - ೧೦೦ ಗ್ರಾಂ ಅರಶಿನ ಬಣ್ಣ ( food color ) ನಿಂಬೆಹಣ್ಣು ಅಥವಾ ಸಿಟ್ರಿಕ್ ಆಸಿಡ್ ಸಕ್ಕರೆ - ೩೦೦ ಗ್ರಾಂ ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಎರಡು ಲೀಟರ್ ಹಾಲನ್ನು ಇಟ್ಟು ಮೀಡಿಯಂ ಫ್ಲೇಮ್ ನಲ್ಲಿ ಹಾಲನ್ನು ಕುದಿಸಬೇಕು. ಹಾಲು ಒಂದು ಕುದಿ ಬಂದ ನಂತರ ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಿ, ಆ ಹಾಲಿಗೆ ಒಂದು ಚಮಚ ಸಿಟ್ರಿಕ್ ಆಸಿಡ್ ಅಥವಾ ಒಂದು ಲಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದಕ್ಕೆ ಕಾಲು ಲೋಟ ನೀರನ್ನು ಬೆರಸಿ ಹಾಲಿಗೆ ಹಾಕಿ ಚೆನ್ನಾಗಿ ಒಂದು ನಿಮಿಷ ಹಾಲನ್ನು ಬೆರೆಸಬೇಕು. ನಂತರ ಹಾಲು ಒಡೆಯಲು ಪ್ರಾರಂಭಿಸುತ್ತದೆ. ಆಗ ಆ ಹಾಲಿನಿಂದ ಸಿಕ್ಕಿದಂತಹ ಗಟ್ಟಿಯಾದ ಪನ್ನೀರನ್ನು ತಕ್ಷಣ ಒಂದು ತೆಳು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ತಣ್ಣನೆ ನೀರಿನಲ್ಲಿ ಎರಡು ಬರಿ ತೊಳೆದುಕೊಳ್ಳಬೇಕು. ಅನಂತರ ಆ ಬಟ್ಟೆಯಲ್ಲಿದ್ದ ಪನ್ನೀರನ್...