ರವಾ ಉತ್ತಪ್ಪ ( How to make rava uttappa)
ರವಾ ಉತ್ತಪ್ಪವನ್ನು ಮಾಡುವ ವಿಧಾನ
ರವಾ ಉತ್ತಪ್ಪಕೆ ಬೇಕಾಗುವ ಸಾಮಗ್ರಿಗಳು
- ರವಾ - ೨ ಕಪ್
- ಮೊಸರು - ೧ ಕಪ್
- ಕ್ಯಾರಟ್ - ೧/೨ ಕಪ್
- ಬೀನ್ಸ್ - ೧/೨ ಕಪ್
- ನೀರುಳ್ಳಿ - ೧/೪ ಕಪ್
- ಕೊತ್ತೊಂಬರಿ ಸೊಪ್ಪು - ೧/೪ ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ತುಪ್ಪ - ೫ ರಿಂದ ೬ ಚಮಚ
ಮಾಡುವ ವಿಧಾನ
ಮೊದಲಿಗೆ ಎರಡು ಕಪ್ ರವೆಗೆ ಒಂದು ಕಪ್ ಮೊಸರನ್ನು ಸೇರಿಸಿ ಚೆನ್ನಾಗಿ ಬೆರಸಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಸುಮಾರು ಇಪ್ಪತ್ತು ನಿಮಿಷಗಳ ವರೆಗೆ ಒಂದು ಮುಚ್ಚಳವನ್ನು ಮುಚ್ಚಿ ಇಡಬೇಕು.
ರವೆ ಹಿಟ್ಟು ಇಪ್ಪತ್ತು ನಿಮಿಷಗಳ ತನಕ ನೆನೆದ ನಂತರ ಅದು ಸ್ವಲ್ಪ ಗಟ್ಟಿಯಾಗುತ್ತದೆ. ನಂತರ ಬೇಕಾದರೆ ಮಾತ್ರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ನಮ್ಮ ರವಾ ಹಿಟ್ಟು ಇರಬೇಕು ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ತುಂಬಾ ಸಣ್ಣಕೆ ಹೆಚ್ಚಿದ ಕ್ಯಾರೆಟ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ಬೀನ್ಸ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ನೀರುಳ್ಳಿ ಕಾಲು ಕಪ್ ಮತ್ತು ಬೇಕಾಗುವಷ್ಟು ಕೊತ್ತೊಂಬರಿ ಸೊಪ್ಪನ್ನು ಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ಬೆರಸಿಕೊಳ್ಳಿ.
ನಂತರ ಒಂದು ದೋಸಾ ತವಾವನ್ನು ಬಿಸಿಯಾಗಲು ಇಡಿ. ಅದಕ್ಕೆ ಒಂದು ಚಮಚ ರವಾ ಹಿಟ್ಟನ್ನು ಹಾಕಿ ಅದನ್ನು ತವಾದಲ್ಲಿ ಸುರಿದು ಒಂದು ಚಮಚ ತುಪ್ಪವನ್ನು ಮೇಲಿನಿಂದ ಹಾಕಿ ತವಾಕ್ಕೆ ಮುಚ್ಚಳವನ್ನು ಮುಚ್ಚಿರಿ ಮತ್ತೆ ಮೂರು ನಿಮಿಷಗಳಾದ ನಂತರ ರವಾ ಉತ್ತಪ್ಪವನ್ನು ತಿರುಗಿಸಿ ಹಾಕಿ, ಎರಡೂ ಕಡೆ ಚೆನ್ನಾಗಿ ಬೆಂದ ನಂತರ ಅದನ್ನು ತವಾದಿಂದ ತೆಗೆದು ಪ್ಲೇಟಿಗೆ ಹಾಕಿರಿ ಈಗ ಬಿಸಿ ಬಿಸಿಯಾದ ಮತ್ತು ಗರಿ ಗರಿಯಾದ ರವಾ ಉತ್ತಪ್ಪ ಸವಿಯಲು ಸಿದ್ದ.
Comments
Post a Comment