Posts

Showing posts with the label Dessert

ಚಾಕಲೇಟ್ ಐಸ್ಕ್ರೀಮ್ (Home made chocolate ice cream )

Image
 ಚಾಕಲೇಟ್ ಐಸ್ಕ್ರೀಮ್ ಮಾಡುವ ವಿಧಾನ  ವೀಕ್ಷಕರಿಗೆ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಅನ್ನು  ಹೇಗೆ ಮಾಡೋದು ನೋಡೋಣ. ಕೇವಲ ನಾಲ್ಕು ವಸ್ತುಗಳಿಂದ ಮನೆಯಲ್ಲಿಯೇ ಸುಲಭವಾಗಿ ಐಸ್ಕ್ರೀಮ್ ಅನ್ನು ತಯಾರಿಸಿಕೊಳ್ಳಬಹುದು. ಇದು ತುಂಬಾ ಟೇಸ್ಟಿ ಯಾಗಿಯೂ ಮತ್ತು ತುಂಬಾ ಕ್ರೀಮಿಯಾಗಿಯೂ ಇರುತ್ತದೆ. ಬನ್ನಿ ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಹೇಗೆ ಮಾಡೋದು ನೋಡೋಣ.   ಚಾಕಲೇಟ್ ಐಸ್ಕ್ರೀಮ್ ಗೆ ಬೇಕಾಗುವ ಸಾಮಾಗ್ರಿಗಳು  ಅಮೂಲ್ ವಿಪ್ಪಿಂಗ್ ಕ್ರೀಮ್ - ೨೦೦ ಗ್ರಾಂ  ಕಂಡೆನ್ಸ್ ಮಿಲ್ಕ್ - ೧೦೦ ಗ್ರಾಂ  ಕೋಕೋ ಪೌಡರ್ - ೨ ಚಮಚ  ಐಸಿಂಗ್ ಶುಗರ್ - ರುಚಿಗೆ ತಕ್ಕಷ್ಟು ಮಾಡುವ ವಿಧಾನ  ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಹಾಕಿಕೊಳ್ಳಿ, ನಂತರ ಆ ಐಸ್ ಕ್ಯೂಬ್ಸ್ ಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯನ್ನು ಫ್ರಿಡ್ಜ್ ನಲ್ಲಿ ಇಟ್ಟು ಆ ಪಾತ್ರೆ ಸಂಪೂರ್ಣ ತಣ್ಣಗಾದ ಮೇಲೆ ತೆಗೆಯಿರಿ. ಐಸ್ ಕ್ಯೂಬ್ ಅನ್ನು ಹಾಕಿದಂತಹ ಪಾತ್ರೆಯ ಮೇಲೆ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಇಟ್ಟಂತಹ ಪಾತ್ರೆಯನ್ನು ಇಡಿರಿ. ನಂತರ ಆ ಪಾತ್ರೆಯಲ್ಲಿ ಅಮೂಲ್ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿಕೊಳ್ಳಿ. ಈ ರೀತಿ ಕ್ರೀಮ್ ಅನ್ನು ವಿಪ್ ಮಾಡುವುದರಿಂದ ಬೇಗ ಕ್ರೀಮ್ ಆಗುತ್ತದೆ ಮತ್ತು ಕ್ರೀಮ್ ಬಿಸಿಯಾಗುವುದಿಲ್ಲ, ಕೆಲವೊಮ್ಮೆ ಕ್ರೀಮ್ ಹ್ಯಾಂಡ್...

ಹಣ್ಣಿನ ಕಸ್ಟರ್ಡ್ ( How to make custard )

Image
ಕಸ್ಟರ್ಡ್ ಅನ್ನು ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಕಸ್ಟರ್ಡ್ ಅನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಕಸ್ಟರ್ಡ್ ಅನ್ನು ಎಲ್ಲರು ಇಷ್ಟ ಪಡುತ್ತಾರೆ. ಊಟ ಆದ ನಂತರ dessert ರೂಪದಲ್ಲಿ ಇದನ್ನು ಸೇವಿಸುತ್ತೇವೆ. ಇದು ತಿನ್ನಲು ತುಂಬಾ ರುಚಿಕರವೂ ಕೂಡ. ಇದರಲ್ಲಿ ಕೆಲವೊಂದು ಹಣ್ಣುಗಳ ಮಿಶ್ರಣ ಇರುವುದರಿಂದ ಆರೋಗ್ಯಕರವೂ ಕೂಡ. ನೀವು ಕೂಡ ಕಸ್ಟರ್ಡ್ ಅನ್ನು ಮನೆಯಲ್ಲಿಯೇ ತಯಾರಿಸಿ. ಅದರ ರುಚಿಯನ್ನು ಸವಿಯಿರಿ.   ಕಸ್ಟರ್ಡ್ ಮಾಡಲು ಬೇಕಾಗುವ ಸಾಮಗ್ರಿಗಳು  ಹಾಲು - ೧ ಲೀಟರ್  ಕಸ್ಟರ್ಡ್ ಪುಡಿ - ೩ ಚಮಚ  ಸಕ್ಕರೆ - ರುಚಿಗೆ ತಕ್ಕಷ್ಟು  ತುಪ್ಪ  ಸೇಬು  ದ್ರಾಕ್ಷಿ  ದಾಳಿಂಬೆ ಕಿವಿ  ಸ್ಟ್ರಾಬೆರಿ  ಮಾವಿನಹಣ್ಣು   ಮಾಡುವ ವಿಧಾನ  ಮೊದಲಿಗೆ ಒಂದು ಲೀಟರ್ ಹಾಲನ್ನು ಗ್ಯಾಸ್ನಲ್ಲಿ ಬಿಸಿಯಾಗಲು ಇಡಿ. ತಕ್ಷಣವೇ ಅರ್ಧ ಲೋಟ ತಣ್ಣನೆ ಹಾಲಿಗೆ ಮೂರೂ ಚಮಚದಷ್ಟು ಕಸ್ಟರ್ಡ್ ಪೌಡರನ್ನು ಸೇರಿಸಿ. ಕಸ್ಟರ್ಡ್ ಪೌಡರ್ ಹಾಲಿನಲ್ಲಿ ಪೂರ್ಣವಾಗಿ ಮಿಕ್ಸ್ ಆದ ನಂತರ, ಗ್ಯಾಸ್ನಲ್ಲಿ ಆಗ ತಾನೇ ಕುದಿಯಲು ಇಟ್ಟಂತಹ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸಿಹಿಗೆ ಬೇಕಾದಷ್ಟು ಸಕ್ಕರೆಯನ್ನು ಹಾಕಿ, ಹಾಲು ಚೆನ್ನಾಗಿ ಕುದಿ ಬರುವ ವರೆಗೆ ಹಾಲನ್ನು ಒಂದು ಸ್ಪೂನ್ ನಿಂದ ಮಿಕ್ಸ್ ಮಾಡುತ್ತ ಇರಿ. ಹಾಲು ಚೆನ್ನಾಗಿ ಕುದಿ ಬಂದ ...