ಚಂಪಾಕಲಿ (How to make champakali)
ಚಂಪಾಕಲಿ ಮಾಡುವ ವಿಧಾನ
ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ. ಚಂಪಾಕಲಿಯನ್ನು ಹಬ್ಬ- ಹರಿದಿನಗಳಲ್ಲಿ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇದನ್ನು ಒಮ್ಮೆ ಮಾಡಿ ತಿಂದರೆ ಪದೇ ಪದೇ ಮಾಡಿ ತಿನ್ನಬೇಕು ಅನ್ನುವಷ್ಟು ರುಚಿಯಾಗಿರುತ್ತದೆ. ಬನ್ನಿ ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ.
ಚಂಪಾಕಲಿಗೆ ಬೇಕಾಗುವ ಸಾಮಾಗ್ರಿಗಳು
- ಹಾಲು - ೨ ಲೀಟರ್
- ಹಾಲಿನ ಪುಡಿ - ೧೦೦ ಗ್ರಾಂ
- ಅರಶಿನ ಬಣ್ಣ ( food color )
- ನಿಂಬೆಹಣ್ಣು ಅಥವಾ ಸಿಟ್ರಿಕ್ ಆಸಿಡ್
- ಸಕ್ಕರೆ - ೩೦೦ ಗ್ರಾಂ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎರಡು ಲೀಟರ್ ಹಾಲನ್ನು ಇಟ್ಟು ಮೀಡಿಯಂ ಫ್ಲೇಮ್ ನಲ್ಲಿ ಹಾಲನ್ನು ಕುದಿಸಬೇಕು. ಹಾಲು ಒಂದು ಕುದಿ ಬಂದ ನಂತರ ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಿ, ಆ ಹಾಲಿಗೆ ಒಂದು ಚಮಚ ಸಿಟ್ರಿಕ್ ಆಸಿಡ್ ಅಥವಾ ಒಂದು ಲಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದಕ್ಕೆ ಕಾಲು ಲೋಟ ನೀರನ್ನು ಬೆರಸಿ ಹಾಲಿಗೆ ಹಾಕಿ ಚೆನ್ನಾಗಿ ಒಂದು ನಿಮಿಷ ಹಾಲನ್ನು ಬೆರೆಸಬೇಕು. ನಂತರ ಹಾಲು ಒಡೆಯಲು ಪ್ರಾರಂಭಿಸುತ್ತದೆ. ಆಗ ಆ ಹಾಲಿನಿಂದ ಸಿಕ್ಕಿದಂತಹ ಗಟ್ಟಿಯಾದ ಪನ್ನೀರನ್ನು ತಕ್ಷಣ ಒಂದು ತೆಳು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ತಣ್ಣನೆ ನೀರಿನಲ್ಲಿ ಎರಡು ಬರಿ ತೊಳೆದುಕೊಳ್ಳಬೇಕು. ಅನಂತರ ಆ ಬಟ್ಟೆಯಲ್ಲಿದ್ದ ಪನ್ನೀರನ್ನು ಕಾಲು ಗಂಟೆ ತೂಗುಹಾಕಬೇಕು. ಹೀಗೆಮಾಡುವುದರಿಂದ ಪನ್ನೀರಿನಲ್ಲಿದ್ದ ಹೆಚ್ಗುವರಿ ನೀರು ಇಳಿದು ಹೋಗುತ್ತದೆ. ನಂತರ ಪನ್ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವವರೆಗೆ food ಕಲರ್ ಅನ್ನು ಸೇರಿಸಿ ನಾದಬೇಕು. ಪನ್ನೀರು ನಾದುತ್ತ ನಾದುತ್ತ ಅದು ತುಂಬಾ ಮೃದುವಾಗುತ್ತ ಬರುತ್ತದೆ. ಅನಂತರ ಅದನ್ನು ಸಿಲೆಂಡರ್ ಆಕಾರದಲ್ಲಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಉಂಡೆ ಮಾಡುವಾಗ ಉಂಡೆಗಳಲ್ಲಿ ಬಿರುಕು ಬಂದರೆ ಪನ್ನೀರನ್ನು ಇನ್ನು ಸ್ವಲ್ಪ ಹೊತ್ತು ನಾದಬೇಕು ಎಂದರ್ಥ.
ನಂತರ ಗ್ಯಾಸ್ನಲ್ಲಿ ೨೫೦ ಗ್ರಾಂ ಸಕ್ಕರೆಗೆ ಒಂದೂವರೆ ಲೀಟರ್ ನೀರನ್ನು ಹಾಕಿ ಕುದಿಯಲು ಇಡಬೇಕು. ನೀರು ಕುದಿಯುತ್ತಿರುವ ಹಾಗೆ ಪನ್ನೀರಿನ ಉಂಡೆಗಳನ್ನು ಆ ಸಕ್ಕರೆ ನೀರಿಗೆ ಹಾಕಿ, ಹಬೆ ಹೋಗದಂತೆ ಆ ಪಾತ್ರೆಗೆ ಗಟ್ಟಿಯಾಗಿ ಒಂದು ಮುಚ್ಚಳವನ್ನು ಮುಚ್ಚಿ ಸುಮಾರು ೨೦ ನಿಮಿಷಗಳ ಕಾಲ ಹೈ ಫ್ಲೇಮ್ ನಲ್ಲಿ ಬೇಯಿಸಬೇಕು. ಬೆಂದ ನಂತರ ಉಂಡೆಗಳು ಗಾತ್ರದಲ್ಲಿ ಉಬ್ಬಿರುತ್ತವೆ. ತದ ನಂತರ ಉಂಡೆಗಳನ್ನು ತೆಗೆದು ಒಂದು ಪ್ಲೇಟ್ ಅಲ್ಲಿ ಹಾಕಿಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ೧೦೦ ಗ್ರಾಂ ಹಾಲಿನ ಪುಡಿಗೆ ೫೦ ಗ್ರಾಂ ಸಕ್ಕರೆ ಮತ್ತು ೨ ಸಣ್ಣ ಚಮಚ ಹಾಲನ್ನು ಅದಕ್ಕೆ ಸೇರಿಸಿ ಮೃದುವಾದ ಪೇಸ್ಟ್ ಆಗುವ ವರೆಗೆ ಚನ್ನಾಗಿ ಬೆರೆಸುತ್ತಾ ಇರಿ. ಮೃದುವಾದ ಪೇಸ್ಟ್ ಆದ ನಂತರ ಒಂದು ಬೌಲ್ಗೆ ಹಾಕಿ ೧೦ ನಿಮಿಷ ಆರಲು ಬಿಡಿ. ಅದು ತಣ್ಣಗಾದ ನಂತರ ಈಗಾಗಲೇ ಬೇಯುಸಿಟ್ಟ ಪನ್ನೀರಿನ ಮದ್ಯದಲ್ಲಿ ಹಾಲಿನ ಪುಡಿಯ ಮಿಶ್ರಣವನ್ನು ಭರ್ತಿ ಮಾಡಬೇಕು. ಭರ್ತಿ ಮಡಿದ ನಂತರ ಚಂಪಾಕಲಿಯು ಸವಿಯಲು ಸಿದ್ದ.

Comments
Post a Comment