ಹಣ್ಣಿನ ಕಸ್ಟರ್ಡ್ ( How to make custard )

ಕಸ್ಟರ್ಡ್ ಅನ್ನು ಮಾಡುವ ವಿಧಾನ 

ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಕಸ್ಟರ್ಡ್ ಅನ್ನು ಹೇಗೆ ಮಾಡೋದು ನೋಡೋಣ. ಸಾಮಾನ್ಯವಾಗಿ ಕಸ್ಟರ್ಡ್ ಅನ್ನು ಎಲ್ಲರು ಇಷ್ಟ ಪಡುತ್ತಾರೆ. ಊಟ ಆದ ನಂತರ dessert ರೂಪದಲ್ಲಿ ಇದನ್ನು ಸೇವಿಸುತ್ತೇವೆ. ಇದು ತಿನ್ನಲು ತುಂಬಾ ರುಚಿಕರವೂ ಕೂಡ. ಇದರಲ್ಲಿ ಕೆಲವೊಂದು ಹಣ್ಣುಗಳ ಮಿಶ್ರಣ ಇರುವುದರಿಂದ ಆರೋಗ್ಯಕರವೂ ಕೂಡ. ನೀವು ಕೂಡ ಕಸ್ಟರ್ಡ್ ಅನ್ನು ಮನೆಯಲ್ಲಿಯೇ ತಯಾರಿಸಿ. ಅದರ ರುಚಿಯನ್ನು ಸವಿಯಿರಿ. 

 ಕಸ್ಟರ್ಡ್ ಮಾಡಲು ಬೇಕಾಗುವ ಸಾಮಗ್ರಿಗಳು 

  • ಹಾಲು - ೧ ಲೀಟರ್ 
  • ಕಸ್ಟರ್ಡ್ ಪುಡಿ - ೩ ಚಮಚ 
  • ಸಕ್ಕರೆ - ರುಚಿಗೆ ತಕ್ಕಷ್ಟು 
  • ತುಪ್ಪ 
  • ಸೇಬು 
  • ದ್ರಾಕ್ಷಿ 
  • ದಾಳಿಂಬೆ
  • ಕಿವಿ 
  • ಸ್ಟ್ರಾಬೆರಿ 
  • ಮಾವಿನಹಣ್ಣು  

ಮಾಡುವ ವಿಧಾನ 

ಮೊದಲಿಗೆ ಒಂದು ಲೀಟರ್ ಹಾಲನ್ನು ಗ್ಯಾಸ್ನಲ್ಲಿ ಬಿಸಿಯಾಗಲು ಇಡಿ. ತಕ್ಷಣವೇ ಅರ್ಧ ಲೋಟ ತಣ್ಣನೆ ಹಾಲಿಗೆ ಮೂರೂ ಚಮಚದಷ್ಟು ಕಸ್ಟರ್ಡ್ ಪೌಡರನ್ನು ಸೇರಿಸಿ. ಕಸ್ಟರ್ಡ್ ಪೌಡರ್ ಹಾಲಿನಲ್ಲಿ ಪೂರ್ಣವಾಗಿ ಮಿಕ್ಸ್ ಆದ ನಂತರ, ಗ್ಯಾಸ್ನಲ್ಲಿ ಆಗ ತಾನೇ ಕುದಿಯಲು ಇಟ್ಟಂತಹ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸಿಹಿಗೆ ಬೇಕಾದಷ್ಟು ಸಕ್ಕರೆಯನ್ನು ಹಾಕಿ, ಹಾಲು ಚೆನ್ನಾಗಿ ಕುದಿ ಬರುವ ವರೆಗೆ ಹಾಲನ್ನು ಒಂದು ಸ್ಪೂನ್ ನಿಂದ ಮಿಕ್ಸ್ ಮಾಡುತ್ತ ಇರಿ. ಹಾಲು ಚೆನ್ನಾಗಿ ಕುದಿ ಬಂದ ನಂತರ ಗ್ಯಾಸ್ ಅನ್ನು ಆಫ್ ಮಾಡಿ, ಹಾಲನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. 


 

ಹಾಲು ತಣ್ಣಗಾದ ಮೇಲೆ ಈಗಾಗಲೇ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಇಟ್ಟುಕೊಂಡಂತಹ ಸೇಬು, ದ್ರಾಕ್ಷಿ, ದಾಳಿಂಬೆ, ಕಿವಿ, ಸ್ಟ್ರಾಬೆರಿ ಮತ್ತು ಮಾವಿನಹಣ್ಣುಗಳನ್ನು,  ತಣ್ಣಗಾಗಲು ಇಟ್ಟ ಹಾಲಿಗೆ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ಗೆ ಬೇಕಾದಷ್ಟು ಸರ್ವ್ ಮಾಡಿ ಅದರ ಮೇಲೆ ೩ ರಿಂದ ೪ ಹನಿ ತುಪ್ಪವನ್ನು ಹಾಕಿ ( ಇದಕ್ಕೆ ಬೇಕಾದರೆ ಡ್ರೈ ಫ್ರೂಟ್ ಮತ್ತು ನಿಮಗೆ ಇಷ್ಟವಾದ ಹಣ್ಣುಗಳನ್ನು ಸೇರಿಸಬಹುದು. ) ಕಸ್ಟರ್ಡ್ ನ ರುಚಿ ನೋಡಿ.



Comments

Popular posts from this blog

ಚಂಪಾಕಲಿ (How to make champakali)

KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )