ಶಾವಿಗೆ ಪಾಯಸ (How to make vermicelli kheer)
ಶಾವಿಗೆ ಪಾಯಸವನ್ನು ಮಾಡುವ ವಿಧಾನ
ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ರುಚಿ ರುಚಿಯಾದ ಶಾವಿಗೆ ಪಾಯಸವನ್ನು ಹೇಗೆ ಮಾಡೊದು ನೋಡೋಣ. ಸಾಮಾನ್ಯವಾಗಿ ಶಾವಿಗೆ ಪಾಯಸವನ್ನು ಹಬ್ಬ-ಹರಿದಿನಗಳಲ್ಲಿ ಕೆಲವೊಂದು ವಿಶೇಷ ಸಂದರ್ಭದಲ್ಲಿ ಅಥವಾ ಹೀಗೇ ಮಾಡಿ ತಿನ್ನಬಹುದಾದಂತಹ ರೆಸಿಪಿ. ಬನ್ನಿ ಈಗ ಶಾವಿಗೆ ಪಾಯಸ ಹೇಗೆ ಮಾಡೋದು ನೋಡೋಣ.
ಶಾವಿಗೆ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು
- ಶಾವಿಗೆ -೧೦೦ ಗ್ರಾಂ
- ಸಕ್ಕರೆ - ರುಚಿಗೆ ತಕ್ಕಷ್ಟು
- ಹಾಲು- ೧/೨ ಲೀಟರ್
- ತುಪ್ಪ- ೪ ರಿಂದ ೫ ಟೀ ಸ್ಪೂನ್
- ಏಲಕ್ಕಿ - ೩ ರಿಂದ ೫
- ದ್ರಾಕ್ಷಿ- ೫೦ ಗ್ರಾಂ
- ಗೋಡಂಬಿ - ೫೦ ಗ್ರಾಂ
- ಬಾದಾಮಿ - ೬
- ಕೇಸರಿ ಎಸಳು - ೭ ರಿಂದ ೧೦ ಎಸಳುಗಳು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ, ತುಪ್ಪ ಬಿಸಿಯಾದ ನಂತರ ಶಾವಿಗೆಯನ್ನು ಹಾಕಿ ಅದರ ಬಣ್ಣ ಸ್ವಲ್ಪ ಬದಲಾಗುವ ವರೆಗೆ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ನಂತರ ಆ ಶಾವಿಗೆಯನ್ನು ಬೇರೊಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಹಾಲನ್ನು ಕುದಿಸಬೇಕು. ಹಾಲು ಕುದಿಯುತ್ತಾ ಇರುವ ಹಾಗೆಯೇ ಹುರಿದಂತಹ ಶಾವಿಗೆಯನ್ನು ಅದಕ್ಕೆ ಹಾಕಿ ಬೇಯುವ ತನಕ ಒಂದು ಚಮಚದಲ್ಲಿ ಶಾವಿಗೆಯನ್ನು ಕಲಡಿಸುತ್ತಾ ಇರಬೇಕು. ನಂತರ ಈಗಾಗಲೇ ಒಂದು ಗಂಟೆಯ ಮುಂಚೆಯೇ ಕಾಲು ಲೋಟ ಹಾಲಿನಲ್ಲಿ ನೆನಸಿ ಇಟ್ಟ ಕೇಸರಿದಳವನ್ನು ಕುದಿಯುತ್ತಿರವ ಮಿಶ್ರಣಕ್ಕೆ ಹಾಕಬೇಕು ಮತ್ತು ಕುಟ್ಟಿ ಪುಡಿ ಮಾಡಿ ಇಟ್ಟುಕೊಂಡಂತಹ ಏಲಕ್ಕಿಯನ್ನು, ಹಾಗೆ ಚೆನ್ನಾಗಿ ಸ್ಲೈಸ್ ಮಾಡಿದ ಬಾದಾಮಿಯನ್ನು ಹಾಕಬೇಕು.
ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಹಾಕಿ ತುಪ್ಪ ಬಿಸಿಯಾದ ನಂತರ ಅದಕ್ಕೆ ದ್ರಾಕ್ಷಿಯನ್ನು ಹಾಕಿ , ಆ ದ್ರಾಕ್ಷಿಯನ್ನು ಚೆನ್ನಾಗಿ ಹುರಿದ ನಂತರ ಅದಕ್ಕೆ ಗೋಡಂಬಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಶಾವಿಗೆ ಪಾಯಸಕ್ಕೆ ಬೆರಸಿ.

ಪಾಯಸವನ್ನು ಸರ್ವ್ ಮಾಡಲು ಒಂದು ಬೌಲ್ಗೆ ಹಾಕಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ಅಥವಾ ನಿಮ್ಮಲ್ಲಿ ಯಾವುದೇ ರೀತಿಯಲ್ಲಿ ಇರುವ ಡ್ರೈ ಫ್ರೂಟ್ ಅನ್ನು ಪಾಯಸದ ಮೇಲೆ ಹಾಕಿ ಅಲಂಕರಿಸಿರಿ. ಈಗ ಪಾಯಸ ಸವಿಯಲು ಸಿದ್ದ.


Nice I will try it
ReplyDeleteNice
ReplyDeleteYammy
ReplyDelete