Posts

Showing posts from January, 2021

ಕುಚ್ಚಿಲಕ್ಕಿ ಲಡ್ಡು (How to make boiled rice laddu)

Image
ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ  ಎಲ್ಲರಿಗೂ ನನ್ನ  ನಮಸ್ಕಾರಗಳು ಇವತ್ತಿನ ದಿನ  ನಾವು ರುಚಿ ರುಚಿಯಾದ ಕುಚ್ಚಿಲಕ್ಕಿ ಲಡ್ಡುವನ್ನು ಮಾಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಿ ಒಂದರಿಂದ ಎರಡು  ತಿಂಗಳವರೆಗೆ ಶೇಖರಿಸಿ ಕೂಡ ಇಡಬಹುದು. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಒಂದು ಸಿಹಿ ತಿನಿಸು ಆಗಿದೆ. ಇದು ಆರೋಗ್ಯಕ್ಕೆ ಉತ್ತಮ ಕೂಡ.  ನೀವು ಕೂಡ ಇದನ್ನು ಮಾಡಿ ರುಚಿಯನ್ನು ಸವಿಯಿರಿ.  ಕುಚ್ಚಿಲಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು  ಕುಚ್ಚಿಲಕ್ಕಿ ( ಕೆಂಪು ಅಕ್ಕಿ ) - ೧ ಕೆ.ಜಿ  ಹೆಸರು ಕಾಳು - ೧/೪ ಕೆ.ಜಿ  ಬಿಳಿ ಎಳ್ಳು - ೧೦೦ ಗ್ರಾಂ  ಬೆಲ್ಲ - ೧/೨ ಕೆ.ಜಿ  ಗೋಡಂಬಿ - ೧೦೦ ಗ್ರಾಂ  ಏಲಕ್ಕಿ ಪುಡಿ - ೧೦ ಗ್ರಾಂ  ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ   ಒಂದು ಕಾವಲಿಯಲ್ಲಿ ಕುಚ್ಚಿಲಕ್ಕಿಯನ್ನು ಚೆನ್ನಾಗಿ ಅರಳುವ ತನಕ ಹುರಿದುಕೊಳ್ಳಿ. ನಂತರ ಕಾವಲಿಯಲ್ಲಿ ಹೆಸರು ಕಾಳು ಸ್ವಲ್ಪ ಗಟ್ಟಿಯಾಗುವ ತನಕ ಹುರಿದುಕೊಳ್ಳಿ. ಹಾಗೆಯೆ ಎಳ್ಳನ್ನು ಕೂಡ ಸ್ವಲ್ಪ ಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಹುರಿದು ಕೊಂಡಿದ್ದ ಕುಚ್ಚಿಲಕ್ಕಿ ಮತ್ತು ಹೆಸರು ಕಾಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.    ಈಗ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಬಿಸಿ ಮಾಡಲು ಇಡಿ, ಅದಕ್ಕೆ ಅರ್ಧ ಲೀಟರ್ ನೀರನ್ನು ...

ಕುಂಬಳಕಾಯಿ ಶರಬತ್ (How to make Ash Melon Juice)

Image
 ಕುಂಬಳಕಾಯಿ ಶರಬತ್ ಮಾಡುವ ವಿಧಾನ ಎಲ್ಲರಿಗೂ ನನ್ನ ನಮಸ್ಕಾರಗಳು ಇವತ್ತಿನ ದಿನ ನಾವು ಕುಂಬಳಕಾಯಿ ಶರಬತ್ ಹೇಗೆ ಮಾಡೋದು ಎಂದು ನೋಡೋಣ. ಈ ಕುಂಬಳಕಾಯಿ ಪಾನೀಯ ದೇಹಕ್ಕೆ ತುಂಬಾ ಆರೋಗ್ಯಕರವಾಗಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತುಂಬಾ ಪರಿಣಾಮಕಾರಿಯಾಗಿರುತ್ತೆದೆ, ಈ ಪಾನೀಯ ಶುಗರ್, ಬಿ.ಪಿ, ಜೀರ್ಣಕ್ರಿಯೆ ಮತ್ತು ಶರೀರದ ತೂಕವನ್ನು ಸಮತೋಲನವಾಗಿ ಇಡಲು ಸಹಕಾರಿಯಾಕಗಿದೆ. ಇದನ್ನು ಸಣ್ಣವರಿಂದ ಹಿಡಿದು ದೊಡ್ಡವರವೆರೆಗೂ ಕೂಡ ಸೇವಿಸಬಹುದು, ಬನ್ನಿ ಈಗ ಕುಂಬಳಕಾಯಿ ಪಾನೀಯ ಹೇಗೆ ಮಾಡೋದು ನೋಡೋಣ.  ಕುಂಬಳಕಾಯಿ ಶರಬತ್ ಮಾಡಲು ಬೇಕಾಗುವ ಸಾಮಗ್ರಿಗಳು : ಬೂದು ಕುಂಬಳಕಾಯಿ - ೧/೨ ಕೆ.ಜಿ.  ಲಿಂಬೆ ಹಣ್ಣು - ೧/೨ ತುಂಡು  ಪುದೀನ ಎಲೆ - ೦೨ ಎಲೆ ಕುಂಬಳಕಾಯಿ ಶರಬತ್ ಮಾಡಲು ವಿಧಾನ : ಬೂದು ಕುಂಬಳಕಾಯಿಯ ಸಿಪ್ಪೆಯನ್ನು ತೆಗೆದು, ಅದರ ಒಳಗಿನ ಬೀಜದ ತಿರುಳನ್ನು ತೆಗೆದು, ನಂತರ ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಮಿಕ್ಸರ್ ನಲ್ಲಿ ಕತ್ತರಿಸಿದ ಕುಂಬಳಕಾಯಿಯ ತುಂಡುಗಳನ್ನು ಹಾಕಿ ಚೆನ್ನಾಗಿ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ, ಈಗ ರುಬ್ಬಿದ ಪೇಸ್ಟನ್ನು ಒಂದು ಶುಚಿಯಾದ ಹಾಗೂ ಬಿಳಿ ಬಟ್ಟೆಯ ಸಹಾಯದಿಂದ ಚೆನ್ನಾಗಿ ಹಿಂಡಿ ರಸವನ್ನು ತೆಗೆದುಕೊಳ್ಳಿ ಇದಕ್ಕೆ ನೀರನ್ನು  ಸೆರೆಸಿಕೊಳ್ಳುವ ಅಗತ್ಯವಿಲ್ಲ.    ಈಗ ಕುಂಬಳಕಾಯಿ...

ರವಾ ಉತ್ತಪ್ಪ ( How to make rava uttappa)

ರವಾ ಉತ್ತಪ್ಪವನ್ನು ಮಾಡುವ ವಿಧಾನ  ಎಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಇನ್ಸ್ಟಂಟ್ ಆಗಿ ಮತ್ತು ಬೇಗನೆ ಆಗುವ ರವ ಉತ್ತಪ್ಪವನ್ನು ಹೇಗೆ ಮಾಡೋದು ನೋಡೋಣ. ಇದು ತಿನ್ನಲು ತುಂಬಾ ರುಚಿಯಾಗಿಯೂ ಮತ್ತು ಗರಿ ಗರಿಯಾಗಿಯೂ ಇರುತ್ತದೆ.  ರವಾ ಉತ್ತಪ್ಪಕೆ ಬೇಕಾಗುವ ಸಾಮಗ್ರಿಗಳು   ರವಾ - ೨ ಕಪ್  ಮೊಸರು - ೧ ಕಪ್  ಕ್ಯಾರಟ್ - ೧/೨ ಕಪ್  ಬೀನ್ಸ್ - ೧/೨ ಕಪ್  ನೀರುಳ್ಳಿ - ೧/೪ ಕಪ್  ಕೊತ್ತೊಂಬರಿ ಸೊಪ್ಪು - ೧/೪ ಕಪ್  ಉಪ್ಪು - ರುಚಿಗೆ ತಕ್ಕಷ್ಟು  ತುಪ್ಪ - ೫ ರಿಂದ ೬ ಚಮಚ  ಮಾಡುವ ವಿಧಾನ  ಮೊದಲಿಗೆ ಎರಡು ಕಪ್ ರವೆಗೆ ಒಂದು ಕಪ್ ಮೊಸರನ್ನು ಸೇರಿಸಿ ಚೆನ್ನಾಗಿ ಬೆರಸಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಸುಮಾರು ಇಪ್ಪತ್ತು ನಿಮಿಷಗಳ ವರೆಗೆ ಒಂದು ಮುಚ್ಚಳವನ್ನು ಮುಚ್ಚಿ ಇಡಬೇಕು.  ರವೆ ಹಿಟ್ಟು ಇಪ್ಪತ್ತು ನಿಮಿಷಗಳ ತನಕ ನೆನೆದ ನಂತರ ಅದು ಸ್ವಲ್ಪ ಗಟ್ಟಿಯಾಗುತ್ತದೆ.  ನಂತರ ಬೇಕಾದರೆ ಮಾತ್ರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ನಮ್ಮ ರವಾ ಹಿಟ್ಟು ಇರಬೇಕು ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ತುಂಬಾ ಸಣ್ಣಕೆ ಹೆಚ್ಚಿದ ಕ್ಯಾರೆಟ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ಬೀನ್ಸ್ ಅರ್ಧ ಕಪ್ , ಸಣ್ಣಕೆ ಹೆಚ್ಚಿದ ನೀರುಳ್ಳಿ...