Posts

Showing posts from December, 2020

ಚಾಕಲೇಟ್ ಐಸ್ಕ್ರೀಮ್ (Home made chocolate ice cream )

Image
 ಚಾಕಲೇಟ್ ಐಸ್ಕ್ರೀಮ್ ಮಾಡುವ ವಿಧಾನ  ವೀಕ್ಷಕರಿಗೆ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಅನ್ನು  ಹೇಗೆ ಮಾಡೋದು ನೋಡೋಣ. ಕೇವಲ ನಾಲ್ಕು ವಸ್ತುಗಳಿಂದ ಮನೆಯಲ್ಲಿಯೇ ಸುಲಭವಾಗಿ ಐಸ್ಕ್ರೀಮ್ ಅನ್ನು ತಯಾರಿಸಿಕೊಳ್ಳಬಹುದು. ಇದು ತುಂಬಾ ಟೇಸ್ಟಿ ಯಾಗಿಯೂ ಮತ್ತು ತುಂಬಾ ಕ್ರೀಮಿಯಾಗಿಯೂ ಇರುತ್ತದೆ. ಬನ್ನಿ ಇವತ್ತಿನ ದಿನ ನಾವು ಚಾಕಲೇಟ್ ಐಸ್ಕ್ರೀಮ್ ಹೇಗೆ ಮಾಡೋದು ನೋಡೋಣ.   ಚಾಕಲೇಟ್ ಐಸ್ಕ್ರೀಮ್ ಗೆ ಬೇಕಾಗುವ ಸಾಮಾಗ್ರಿಗಳು  ಅಮೂಲ್ ವಿಪ್ಪಿಂಗ್ ಕ್ರೀಮ್ - ೨೦೦ ಗ್ರಾಂ  ಕಂಡೆನ್ಸ್ ಮಿಲ್ಕ್ - ೧೦೦ ಗ್ರಾಂ  ಕೋಕೋ ಪೌಡರ್ - ೨ ಚಮಚ  ಐಸಿಂಗ್ ಶುಗರ್ - ರುಚಿಗೆ ತಕ್ಕಷ್ಟು ಮಾಡುವ ವಿಧಾನ  ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಹಾಕಿಕೊಳ್ಳಿ, ನಂತರ ಆ ಐಸ್ ಕ್ಯೂಬ್ಸ್ ಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯನ್ನು ಫ್ರಿಡ್ಜ್ ನಲ್ಲಿ ಇಟ್ಟು ಆ ಪಾತ್ರೆ ಸಂಪೂರ್ಣ ತಣ್ಣಗಾದ ಮೇಲೆ ತೆಗೆಯಿರಿ. ಐಸ್ ಕ್ಯೂಬ್ ಅನ್ನು ಹಾಕಿದಂತಹ ಪಾತ್ರೆಯ ಮೇಲೆ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಇಟ್ಟಂತಹ ಪಾತ್ರೆಯನ್ನು ಇಡಿರಿ. ನಂತರ ಆ ಪಾತ್ರೆಯಲ್ಲಿ ಅಮೂಲ್ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿಕೊಳ್ಳಿ. ಈ ರೀತಿ ಕ್ರೀಮ್ ಅನ್ನು ವಿಪ್ ಮಾಡುವುದರಿಂದ ಬೇಗ ಕ್ರೀಮ್ ಆಗುತ್ತದೆ ಮತ್ತು ಕ್ರೀಮ್ ಬಿಸಿಯಾಗುವುದಿಲ್ಲ, ಕೆಲವೊಮ್ಮೆ ಕ್ರೀಮ್ ಹ್ಯಾಂಡ್...

KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )

Image
KFC ತರಹದ ಚಿಕನ್ ಲೆಗ್ ಪೀಸ್ ಮಾಡುವ ವಿಧಾನ  ನಮಸ್ಕಾರ ನನ್ನ ವೀಕ್ಷಕರಿಗೆ. ಇವತ್ತಿನ ದಿನ ನಾವು ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ. ಇದಕ್ಕೆ ಚಿಕನ್ ಫಿಂಗರ್ಸ್ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ, ಪಾರ್ಟಿ ಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಮಾಡುತ್ತೇವೆ. ಇದು ತಿನ್ನಲು ಹೊರಗಿಂದ ಕ್ರಂಚಿ ಒಳಗಿಂದ ಜ್ಯೂಸಿ ಮತ್ತು ತುಂಬಾ ಕ್ರಿಸ್ಪಿಯಾಗಿರುತ್ತದೆ. ಬನ್ನಿ ಈಗ ನಾವು KFC ಸ್ಟೈಲ್ ನಲ್ಲಿ ಚಿಕನ್ ಲೆಗ್ ಪೀಸ್ ಹೇಗೆ ಮಾಡೋದು ನೋಡೋಣ.  ಚಿಕನ್ ಲೆಗ್ ಪೀಸ್ ಗೆ ಬೇಕಾಗುವ ಸಾಮಗ್ರಿಗಳು  ಚಿಕನ್ ಲೆಗ್ ಪೀಸ್ - ೧೨ ಶುಂಠಿ ಬೆಳ್ಳುಳ್ಳಿ ಪೇಸ್ಟ್ - ೧ ಚಮಚ  ಮೆಣಸಿನ ಪುಡಿ - ೧ ಚಮಚ  ಕಾಳುಮೆಣಸಿನ ಪುಡಿ - ೧ ಚಮಚ  ಅರಶಿನ ಪುಡಿ - ೧/೨ ಚಮಚ ಮೊಸರು - ೫೦ ಗ್ರಾಂ  ಸೋಯಾ ಸಾಸ್ - ೧ ಚಮಚ  ಕಾರ್ನ್ ಫ್ಲೋರ್ - ೨ ಚಮಚ  ಮೈದಾ ಹಿಟ್ಟು - ೪ ಚಮಚ  ಬ್ರೆಡ್ ಕ್ರಮ್ಸ್ - ೨ ಚಮಚ ಜೀರಿಗೆ - ೧ ಚಮಚ ಮೊಟ್ಟೆ - ೩  ರಿಫೈನ್ಡ್ ಆಯಿಲ್ - ೧/೨ ಲೀಟರ್  ಉಪ್ಪು - ರುಚಿಗೆ ತಕ್ಕಷ್ಟು  ಮಾಡುವ ವಿಧಾನ    ಮೊದಲು ಚಿಕನ್ ಲೆಗ್ ಪೀಸ್ ಗೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಅರಶಿನ ಪುಡಿ, ಮೆಣಸಿನ ಪುಡಿ, ಸೋಯಾ ಸಾಸ್, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಡಿಸಿ ಮ...

ಚಂಪಾಕಲಿ (How to make champakali)

Image
ಚಂಪಾಕಲಿ ಮಾಡುವ ವಿಧಾನ  ವೀಕ್ಷಕರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಇವತ್ತಿನ ದಿನ ನಾವು ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ. ಚಂಪಾಕಲಿಯನ್ನು ಹಬ್ಬ- ಹರಿದಿನಗಳಲ್ಲಿ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇದನ್ನು ಒಮ್ಮೆ ಮಾಡಿ ತಿಂದರೆ ಪದೇ ಪದೇ ಮಾಡಿ ತಿನ್ನಬೇಕು ಅನ್ನುವಷ್ಟು ರುಚಿಯಾಗಿರುತ್ತದೆ. ಬನ್ನಿ ಚಂಪಾಕಲಿಯನ್ನು ಹೇಗೆ ಮಾಡೋದು ನೋಡೋಣ.  ಚಂಪಾಕಲಿಗೆ ಬೇಕಾಗುವ ಸಾಮಾಗ್ರಿಗಳು  ಹಾಲು - ೨ ಲೀಟರ್  ಹಾಲಿನ ಪುಡಿ - ೧೦೦ ಗ್ರಾಂ  ಅರಶಿನ ಬಣ್ಣ ( food color )  ನಿಂಬೆಹಣ್ಣು ಅಥವಾ ಸಿಟ್ರಿಕ್ ಆಸಿಡ್  ಸಕ್ಕರೆ - ೩೦೦ ಗ್ರಾಂ  ಮಾಡುವ ವಿಧಾನ   ಒಂದು ಪಾತ್ರೆಯಲ್ಲಿ ಎರಡು ಲೀಟರ್ ಹಾಲನ್ನು ಇಟ್ಟು ಮೀಡಿಯಂ  ಫ್ಲೇಮ್ ನಲ್ಲಿ ಹಾಲನ್ನು ಕುದಿಸಬೇಕು. ಹಾಲು ಒಂದು ಕುದಿ ಬಂದ ನಂತರ ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಿ, ಆ ಹಾಲಿಗೆ ಒಂದು ಚಮಚ ಸಿಟ್ರಿಕ್ ಆಸಿಡ್ ಅಥವಾ ಒಂದು ಲಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದಕ್ಕೆ ಕಾಲು ಲೋಟ ನೀರನ್ನು ಬೆರಸಿ ಹಾಲಿಗೆ ಹಾಕಿ ಚೆನ್ನಾಗಿ ಒಂದು ನಿಮಿಷ ಹಾಲನ್ನು ಬೆರೆಸಬೇಕು. ನಂತರ ಹಾಲು ಒಡೆಯಲು ಪ್ರಾರಂಭಿಸುತ್ತದೆ. ಆಗ ಆ ಹಾಲಿನಿಂದ  ಸಿಕ್ಕಿದಂತಹ ಗಟ್ಟಿಯಾದ ಪನ್ನೀರನ್ನು ತಕ್ಷಣ ಒಂದು ತೆಳು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ತಣ್ಣನೆ ನೀರಿನಲ್ಲಿ ಎರಡು ಬರಿ ತೊಳೆದುಕೊಳ್ಳಬೇಕು. ಅನಂತರ ಆ ಬಟ್ಟೆಯಲ್ಲಿದ್ದ ಪನ್ನೀರನ್...